ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಭರತನಾಟ್ಯ ಕಲೆ ಎನ್ನುವುದು ಕೆಲವರನ್ನು ಮಾತ್ರ ಕೈಬೀಸಿ ಕರೆಯುತ್ತದೆ. ಅಂತೆಯೇ ಈ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ತನ್ನಿಂದ ಇನ್ನೂ ಹಲವರಿಗೆ ತಲುಪಬೇಕು, ಅವರೂ ಕೂಡ ಜೀವನದಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆಗೈಯ್ಯಬೇಕು ಎಂಬ ವಿಶಾಲ ಮನೋಭಾವನೆಯೊಂದಿಗೆ ಕಳೆದ ಸುಮಾರು 18 ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಕಂಚನಳ್ಳಿಯ ಹೆಮ್ಮೆಯ ಭರತನಾಟ್ಯ ಗುರುಗಳಾದ ಕೃಷ್ಣ ಭಾಗ್ವತ್ ರವರು ಅಸಂಖ್ಯಾತ ಮಕ್ಕಳಿಗೆ ಭರತನಾಟ್ಯ ಕಲೆಯನ್ನು ಕಲಿಸುತ್ತಾ ಬಂದಿದ್ದಾರೆ.
ಕಲಾ ಸೇವೆಗಾಗಿ ಕಳೆದ ಸುಮಾರು 18 ವರ್ಷಗಳಿಂದ ನಿರಂತರವಾಗಿ ಭರತನಾಟ್ಯ ಗುರುಗಳಾಗಿ ಕೃಷ್ಣ ಭಾಗ್ವತ್ ರವರು ಅಸಂಖ್ಯಾತ ಮಕ್ಕಳಿಗೆ ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಭರತನಾಟ್ಯ ಕಲಿಕೆಯ ಜೊತೆ ಜೊತೆಗೆ ಮಕ್ಕಳಿಗೆ ಆದರ್ಶ ಸಂಸ್ಕಾರ ಸಂಸ್ಕøತಿಗಳನ್ನು ಮೈಗೂಡಿಸಿಕೊಳ್ಳಲು ಸದಾ ಪ್ರೇರಣಾದಾಯಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಕೃಷ್ಣ ಭಾಗ್ವತ್ ಅವರ ಗರಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಭರತನಾಟ್ಯ ಕಲೆಯನ್ನು ಕರಗತ ಮಾಡಿಕೊಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಕಲೆಯನ್ನೇ ಉಸಿರಾಗಿಸಿಕೊಂಡ ಕೃಷ್ಣ ಭಾಗ್ವತ್ ಅವರು ಗುರುಗಳಾಗಿ ಸೇವೆಯನ್ನು ಸಲ್ಲಿಸುತ್ತಿರುವ ದಾಂಡೇಲಿ ನಗರದ ಸಂಸ್ಕಾರ ಸಹಕಾರ ಭಾರತಿ ಕಲಾ ಕೇಂದ್ರ, ಶ್ರೀ ಶಂಕರ ಮಠದ ವಿದ್ಯಾರ್ಥಿಗಳಿಂದ ದಾಂಡೇಲಿ ನವರಾತ್ರಿ ಉತ್ಸವದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಡೆದ ಸಮೂಹ ಭರತನಾಟ್ಯ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ದಾಂಡೇಲಿಯ ಮಕ್ಕಳ ಪಾಲಿಗೆ ಮೆಚ್ಚಿನ ಹಾಗೂ ವಾತ್ಸಲ್ಯದ ಗುರುಗಳಾಗಿರುವ ಕೃಷ್ಣ ಭಾಗ್ವತ್ ಅವರ ಕಲಾಸೇವೆ ಅನುಕರಣೀಯ ಮತ್ತು ಅಭಿನಂದನೀಯ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಎಂಬ ಒಂದು ಪುಟ್ಟ ಹಳ್ಳಿಯ ಕಂಚನಳ್ಳಿ ಎಂಬ ಮನೆಯವರಾದ ಕೃಷ್ಣ ಭಾಗ್ವತ್ ರವರು ಕಳೆದ ಸುಮಾರು 18 ವರ್ಷಗಳಿಂದ ಮಂಚಿಕೇರಿಯಿಂದ ದಾಂಡೇಲಿಗೆ ಓಡಾಟ ನಡೆಸಿ ಮಕ್ಕಳಿಯ ಭರತನಾಟ್ಯ ಕಲೆಯನ್ನು ಕಲಿಸುತ್ತಾ ಬಂದಿದ್ದಾರೆ. ಕೃಷ್ಣ ಭಾಗ್ವತ್ ರವರ ಭರತನಾಟ್ಯ ಪ್ರದರ್ಶನ ಕರ್ನಾಟಕ ರಾಜ್ಯಾದ್ಯಂತ ಮಾತ್ರವಲ್ಲದೆಯೇ ಹೊರ ರಾಜ್ಯಗಳಲ್ಲಿಯೂ ತಮ್ಮ ಭರತನಾಟ್ಯ ಕಲೆಯನ್ನು ಪ್ರದರ್ಶಿಸಿದ್ದಾರೆ. ಇವರಿಗೆ ಹತ್ತಾರು ಪ್ರಶಸ್ತಿಗಳು ಕೂಡ ಬಂದಿದ್ದು ಗೌರವಕ್ಕೆ ಪಾತ್ರರಾಗಿದ್ದಾರೆ. ಇವರ ಈ ಭರತನಾಟ್ಯ ಕಲಾ ಸೇವೆ ಇದೇ ರೀತಿ ಮುಂದುವರೆಯಲಿ ಮತ್ತು ಇನ್ನೂ ಹಲವು ವಿದ್ಯಾರ್ಥಿಗಳಿಗೆ ಸಾಧನೆಗೆ ದಾರಿದೀಪವಾಗಲಿ ಎಂದು ಹಾರೈಸೋಣ.