ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಕಾರವಾರ ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಪ್ರವಾಸೋದ್ಯಮ ಇಲಾಖೆ ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ,ಜಿಲ್ಲಾಡಳಿತ ಉತ್ತರಕನ್ನಡ ಇವರ ಸಹಯೋಗದೊಂದಿಗೆ ಕರಾವಳಿ ಉತ್ಸವ 2025ರ ಅಂಗವಾಗಿ ಇಲ್ಲಿನ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಶನಿವಾರ ಸಂಜೆ ನಡೆದ 6 ನೇ ದಿನದ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರ ಮನಸೂರೆಗೊಂಡವು.
ಈ ಸಂದರ್ಭದಲ್ಲಿ ಸುಮಂಗಲಾ ದೇಸಾಯಿ ನೇತೃತ್ವದಲ್ಲಿ ಶ್ರೇಯಾ ಅಭಿವೃದ್ಧಿ ಟ್ರಸ್ಟ್ ದಾಂಡೇಲಿ ಇವರಿಂದ ಯಕ್ಷಗಾನ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು. ಯಕ್ಷಗಾನ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರು:ಶಶಾಂಕ ಭಟ್ ಬೋಡೆ,ಯಲ್ಲಾಪುರ. ಮದ್ದಳೆ:ಸುರೇಶ ಕೋವೆ ಕಾರವಾರ. ಚೆಂಡೆ:ಕುಮಾರ ದೀಕ್ಷಿತ್ ,ಅಂಕೋಲಾ ಉತ್ತಮ ಸಹಕಾರ ನೀಡಿದರು.
ಮುಮ್ಮೇಳದಲ್ಲಿ:ಕುಮಾರ ಪುನೀತ್ ನಾಯ್ಕ ಹನುಮಟ್ಟ, ಅಂಕೋಲಾ.ಕುಮಾರಿ ಅರ್ಪಿತಾ ಭಟ್ ಅಂಕೋಲಾ,ಕುಮಾರ ಶ್ರೀಕೃಷ್ಣ ಇಡಗುಂದಿ, ಯಲ್ಲಾಪುರ, ಕುಮಾರ ರಾಜೇಶ ಇಡಗುಂದಿ, ಯಲ್ಲಾಪುರ ತಮ್ಮ ಅಮೋಘ ಅಭಿನಯದ ಪ್ರದರ್ಶನ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಲಕ್ಷ್ಮೀಪ್ರೀಯ ಮೇಡಂರವರು ಸುಮಂಗಲಾ ದೇಸಾಯಿ ನೇತೃತ್ವದ ತಂಡಕ್ಕೆ ಪ್ರಮಾಣ ಪತ್ರ ವಿತರಿಸಿದರು.ಈ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮಂಗಲಾ ನಾಯ್ಕ,ಕಲಾವಿದ ತಂಡದವರು ಉಪಸ್ಥಿತರಿದ್ದರು.
