ಸುದ್ಧಿಕನ್ನಡ ವಾರ್ತೆ
ಪಣಜಿ: ಎಚ್ಚರ ಪ್ರವಾಸಿಗರೇ ಎಚ್ಚರ…ಗೋವಾ ಗಡಿಯಲ್ಲಿ ಬೀಳುತ್ತಿದೆ ಭಾರಿ ದಂಡ….! ಗೋವಾದ ಗಡಿಯಲ್ಲಿ ಕರ್ನಾಟಕದಿಂದ ಬರುವ ವಾಹನ ಸವಾರರಿಂದ ಭಾರಿ ಲೂಟಿ ನಡೆಯುತ್ತಿದೆಯೇ…? ಕರ್ನಾಟಕದಲ್ಲಿ ಪಿಯುಸಿ ಮಾಡಿಸಿದ್ದರೂ ಕೂಡ ಗೋವಾ ಭಾರಿ ಪ್ರಮಾಣದ ದಂಡ (A hefty fine)ವಿಧಿಸಲಾಗುತ್ತಿದೆ. ಇದರಿಂದಾಗಿ ಗೋವಾ ಗಡಿ (Goa border) ಪ್ರವೇಶಿಸಲು ಕರ್ನಾಟಕದ ವಾಹನ ಸವಾರರು ಭಯಪಡುವಂತಾಗಿದೆ. ಎಲ್ಲ ಕಾಗದಪತ್ರವಿದ್ದರೂ ಕೂಡ ಗೋವಾ ಗಡಿಯಲ್ಲಿರುವ ಇ-ಚಲನ್ ಟೋಲ್ ನಾಕಾದಲ್ಲಿ ಭಾರಿ ದಂಡ ವಿಧಿಸಲಾಗುತ್ತಿದೆ. ಇದರಿಂದ ಬೇಸಕ್ತ ನಾಗರೀಕರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಗೋವಾ ಗಡಿಯಲ್ಲಿ ಅಳವಡಿಸಲಾಗಿರುವ ಇ-ಚಲನ್ ಟೋಲ್ ನಾಕಾದಲ್ಲಿ ( E-Challan Toll Naka) ಎಲ್ಲ ವಾಹನಗಳ ತಪಾಸಣೆ ಕ್ಯಾಮರಾ ಮೂಲಕವೇ ಆಗುತ್ತಿದೆ. ಕರ್ನಾಟಕದ ವಾಹನಗಳು ಕರ್ನಾಟಕದಲ್ಲಿ ಪಿಯುಸಿ ಮಾಡಿಸಿಕೊಂಡಿದ್ದರೂ ಕೂಡ ಅದು ಆನ್ ಲೈನ್ ನಲ್ಲಿ ತೋರಿಸದ ಕಾರಣ ಇಲ್ಲಿ ಭಾರಿ ಪ್ರಮಾಣದ ದಂಡ ವಿಧಿಸಲಾಗುತ್ತಿದೆ. ಇದರಿಂದಾಗಿ ಗೋವಾ ಗಡಿ ಪ್ರವೇಶಿಸಲು ಕರ್ನಾಟಕದ ವಾಹನ ಸವಾರರು ಭಯಪಡುವಂತಾಗಿದೆ. ಇದು ಗೋವಾ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ನೀಡುತ್ತಿದೆ ಎಂದೇ ಹಲವರು ಅಭಿಪ್ರಾಯ ಪಟ್ಟಿದ್ದಾರೆ.

 

ಗೋವಾದ ಮಡಗಾಂವ-ಕಾರವಾರ ( Madgaon-Karwar, Goa) ರಾಷ್ಟ್ರೀಯ ಹೆದ್ದಾರಿಯಲ್ಲಿ ಲೋಲಯೇಯಲ್ಲಿ ನಿರ್ಮಿಸಲಾಗಿರುವ ಟೋಲ್ ನಾಕಾದಲ್ಲಿ ಇ-ಚಲನ್ ಹೆಸರಿನಲ್ಲಿ ವಾಹನ ಸವಾರರಿಂದ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಾಗರೀಕರು ಈ ಟೋಲ್ ನಾಕಾ ಬಂದ್ ಮಾಡುವಂತೆ ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

ಎಲ್ಲಾ ಕಾಗದಪತ್ರ ಇದ್ದರೂ ಕೂಡ ವಾವನ ಸವಾರರಿಗೆ ವಿನಾಕಾರಣ ತೊಂದರೆ ಕೊಡಲಾಗುತ್ತಿದೆ. ಇಲ್ಲಿ ಸ್ವಯಂ ಚಾಲಿತ ಯಂತ್ರ ಅಳವಡಿಸಲಾಗಿದೆ. ಯಾವುದೇ ವಾಹನವು ಈ ಟೋಲ್ ನಾಕಾದಲ್ಲಿ ಕ್ಯಾಮರಾ ಮುಂದೆ ಬರುತ್ತಿದ್ದಂತೆಯೇ ಆ ವಾಹನದ ವಿಮೆ, ಪಿಯುಸಿ, ಕಾಗದಪತ್ರಗಳ ತಪಾಸಣೆ ನಡೆಸುತ್ತದೆ. ಇದರಲ್ಲಿ ಯಾವುದೇ ದೋಷ ಕಂಡುಬಂದರೆ ಇ-ಚಲನ್ ಜನರೇಟ್ ಆಗುತ್ತದೆ. ಇದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಸ್ವಯಂ ಚಾಲಿತ ಯಂತ್ರದಲ್ಲಿ ದೋಷವಿದೆ. ಈ ಟೋಲ್ ನಾಕಾದಿಂದ ಮೂರು ಕಿಮಿ ಅಂತರದಲ್ಲಿ ಪೊಳೆ ಪೋಲಿಸ್ ಟ್ರಾಫಿಕ್ ಪೋಲಿಸ್ ಚೆಕ್ ಪೋಸ್ಟ ಇರುವಾಗ ಈ ನಾಕಾ ಅಗತ್ಯವೇನಿದೆ…? ಎಂದು ನಾಗರೀಕರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಗಜೇಶ್ ಶಿರೋಡಕರ್, ಪೋಲಿಸ್ ಉಪ ಅಧೀಕ್ಷಕ ನಿಲೇಶ್ ರಾಣೆ, ಟ್ರಾಫಿಕ್ ಪೋಲಿಸ್ ಉಪ ಸಂಚಾಲಕ ರಾಜೇಶ್ ನಾಯಕ, ರವರು ಆಂದೋಲನಕಾರರಿಗೆ ತಿಳಿಹೇಳುವ ಪ್ರಯತ್ನ ಮಾಡಿದರು.

ಈ ಟೋಲ್ ನಾಕಾ ಕಿರಿದಾದ ರಸ್ತೆಯಲ್ಲಿದ್ದು, ಈ ಹೆದ್ದಾರಿಯಲ್ಲಿ ಇರುವ ಟೋಲ್ ನಾಕಾದಲ್ಲಿ ಎರಡು ಒಳ ರಸ್ತೆಗಳಿವೆ. ಹೆದ್ದಾರಿಯಲ್ಲಿ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಇದರಿಂದಾಗಿ ಒಳರಸ್ತೆಗೆ ಓಡಾಟ ನಡೆಸುವ ಸ್ಥಳೀಯರಿಗೂ ಹೆಚ್ಚಿನ ತೊಂದರೆಯಾಗುತ್ತಿದೆ. ಇದರಿಂದಾಗಿ ಈ ಚೆಕ್ ಪೋಸ್ಟನ್ನು ಪೊಳೆ ಚೆಕ್ ಪೋಸ್ಟಗೆ ಸ್ಥಳಾಂತರಿಸಬೇಕು ಎಂದು ಸ್ಥಳೀಯ ಜನತೆ ಆಘ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮೊಲೆಮ್ ಚೆಕ್ ಪೋಸ್ಟನಲ್ಲಿಯೂ ತೊಂದರೆ….?
ಕರ್ನಾಟಕದಿಂದ ಗೋವಾಕ್ಕೆ ಬರುವ ಮೋಲೆಮ್ ಹೆದ್ದಾರಿಯಲ್ಲಿಯೂ (Molem Highway) ಕೂಡ ಇ-ಚನಲ್ ವಾಹನ ತಪಾಸಣೆ ನಡೆಸಲಾಗುತ್ತಿದೆ. ಅಲ್ಲಿಯೂ ಕೂಡ ಕ್ಯಾಮರಾ ಮೂಲಕವೇ ವಾಹನಗಳ ಎಲ್ಲ ಕಾಗದಪತ್ರಗಳ ತಪಾಸಣೆ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಮಾಡಿಸಿಕೊಂಡ ಕೆಲವು ಪಿಯುಸಿ ಕಾಗದಪತ್ರಗಳು ಇಲ್ಲಿ ಆನ್ ಲೈನ್ ನಲ್ಲಿ ತೋರಿಸುತ್ತಿಲ್ಲ ಎನ್ನಲಾಗಿದ್ದು ಇದರಿಂದಾಗಿ ಕರ್ನಾಟಕದಿಂದ ಬರುವ ಹಲವು ವಾಹನಗಳ ಕಾಗದಪತ್ರ ಸರಿಯಾಗಿದ್ದರೂ ಕೂಡ ದಂಡ ಭರಿಸುವ ಅನಿವಾರ್ಯತೆ ಎದುರಾಗುತ್ತಿದೆ.

ವಾಹನದ ಯಾವುದೇ ಕಾಗದಪತ್ರ ಸರಿಯಾಗಿಲ್ಲದಿದ್ದರೆ ವಾಹನ ಮಾಲೀಕರಿಗೆ 10,500 ರೂ ದಂಡದ (Fine of Rs 10,500) ನೋಟಿಸ್ ನೀಡಲಾಗುತ್ತಿದೆ. ಇದರಿಂದಾಗಿ ಗೋವಾಕ್ಕೆ ಬರುವ ಪ್ರವಾಸಿಗರ ವಾಹನಗಳಿಗೆ ದೊಡ್ಡ ದೊಡೆತ ಬೀಳುತ್ತಿದೆ. ಇತರ ರಾಜ್ಯಗಳಿಂದ ಗೋವಾ ಮಾರ್ಗವಾಗಿ ಬೇರೆಡೆ ಹೋಗುವ ವಾಹನ ಸವಾರರಿಗೂ ಕೂಡ ತೊಂದರೆಯುಂಟಾಗುತ್ತಿದೆ.