ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ರವರ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ಯಲ್ಲಾಪುರ ತಾಲೂಕಿನ ಅನಗೋಡದಲ್ಲಿ ಸುಶಾಸನ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರಾದ ಶ್ರೀ ಗಣಪತಿ ಮಾನಿಗದ್ದೆ ಅವರನ್ನು ಸನ್ಮಾನಿಸಲಾಯಿತು. ಪಕ್ಷದ ಪ್ರಮುಖರಾದ ಹರಿಪ್ರಕಾಶ್ ಕೋಣೆಮನೆ, ಮಂಡಳ ಅಧ್ಯಕ್ಷ ಶ್ರೀ ಪ್ರಸಾದ ಹೆಗಡೆ, ಹಿರಿಯ ಸಹಕಾರಿಗಳಾದ ಶ್ರೀ ನಾರಾಯಣ ಭಟ್ ಅಗ್ಗಾಶಿಕುಂಬ್ರಿ,ಶ್ರೀ ಜಿ.ಎನ್. ಗಾಂವಕರ,ಶ್ರೀ ರಾಮು ನಾಯ್ಕ್,ಶ್ರೀ ಪ್ರಮೋದ ಹೆಗಡೆ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
