ಸುದ್ದಿ ಕನ್ನಡ ವಾರ್ತೆ

. ನವಲಗುಂದ:ಗ್ರಾಮೀಣ ಮಟ್ಟದಿಂದ ಲೋಕಸಭಾ ಕ್ಷೇತ್ರದ ಮಟ್ಟಕ್ಕೆ ಆಯೋಜಿಸಲಾಗುತ್ತಿರುವ ‘ಧಾರವಾಡ ಸಂಸದ ಕ್ರೀಡಾ ಮಹೋತ್ಸವ- 2025’ ರ ಕುರಿತು ಸೋಮವಾರ ನವಲಗುಂದ ವಿಧಾನಸಭಾ ಕ್ಷೇತ್ರ ಪ್ರಮುಖರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು.

‎ಗ್ರಾಮೀಣ ಕ್ರೀಡೆಗಳನ್ನು ಒಳಗೊಂಡಂತೆ ವಿವಿಧ ಕ್ರೀಡೆಗಳನ್ನು ಈ ಕ್ರೀಡಾ ಮಹೋತ್ಸವದಲ್ಲಿ ಆಯೋಜಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ Narendra Modi ಅವರ ಆಶಯದಂತೆ, ಈ ಕ್ರೀಡಾಕೂಟವು ಗ್ರಾಮೀಣ ಮತ್ತು ನಗರ ಭಾಗದ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ ನೀಡುತ್ತಿದ್ದು ಕ್ಷೇತ್ರದ ಯುವಕ/ಯುವತಿಯರು ಹೆಸರನ್ನು ನೊಂದಾಯಿಸಿ ಕ್ರೀಡೆಯಲ್ಲಿ ಭಾಗವಹಿಸಿ.

‎ಈ ಸಂದರ್ಭದಲ್ಲಿ ಧಾರವಾಡದ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ, ಮಂಡಳ ಅಧ್ಯಕ್ಷರಾದ ಮುತ್ತಣ್ಣ ಮನಮಿ, ಮಂಜುನಾಥ್ ಗಣಿ, ಮಾಜಿ ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಷಣ್ಮುಖ ಗುರಿಕರ್ ಸೇರಿದಂತೆ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.