ಸುದ್ಧಿಕನ್ನಡ ವಾರ್ತೆ
Goa: ಎರಡು ಗುಂಪಿನ ವೈಶಮ್ಯದಿಂದಾಗಿ ನವರಾತ್ರಿಯ ಉತ್ಸವದ ಸಂದರ್ಭದಲ್ಲಿ ದೇವಿಯ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿ ಬಂದ್ ಮಾಡಿದ ಘಟನೆ ಗೋವಾದ ಮಾಂದ್ರೆಯಲ್ಲಿ ನಡೆದಿದೆ. ಮಾಂದ್ರೆಯ ಶ್ರೀ ಭೂಮಿಕಾ ದೇವಸ್ಥಾನದ ಬಾಗಿಲಿಗೆ ಯಾರೋ ಬಂದು ನವರಾತ್ರಿ ಉತ್ಸವದ ಸಂದರ್ಭದಲ್ಲಿ ಬಾಗಿಲಿಗೆ ಬೀಗ ಹಾಕಿ ಬಂದ್ ಮಾಡಿ ಹೋಗಿರುವುದು ಗ್ರಾಮದಲ್ಲಿ ಗ್ರಾಮಸ್ಥರಲ್ಲಿ ಬೇಸರ ಮೂಡುವಂತೆ ಮಾಡಿದೆ. ಈ ಕುರಿತು ಪೋಲಿಸರು ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಮಾಂದ್ರೇ ತಹಶೀಲ್ದಾರ, ಉಪಜಿಲ್ಲಾಧಿಕಾರಿಗಳು ಪರಿಸ್ಥಿತಿಯ ಬೇಲೆ ತೀವ್ರ ನಿಗಾ ವಹಿಸಿದ್ದಾರೆ. ನವರಾತ್ರಿ ಉತ್ಸವ ಕಾರ್ಯಕ್ರಮಕ್ಕೆ ಯಾವುದೇ ಅಡಚಣಿ ಆಗಲು ಬಿಡುವುದಿಲ್ಲ, ಈ ಎರಡು ಗುಂಪಿನ ನಡುವಿನ ವಾದವನ್ನು ಶಮನಗೊಳಿಸಲಾಗುವುದು ಎಂದು ಉಪಜಿಲ್ಲಾಧಿಕಾರಿ ಶಿವಪ್ರಸಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಂದ್ರೆ-ಆಶ್ವೆಯ ಶ್ರೀ ಭೂಮಿಕಾ ದೇವಸ್ಥಾನದ ಗ್ರಾಮದಲ್ಲಿ ಎರಡು ಗುಂಪಿನ ನಡುವೆ ಕಳೆದ ಅನೇಕ ದಿನಂಗಳಿಂದ ವಾದ-ವಾಗ್ವಾದ ನಡೆಯುತ್ತಿದೆ. ಈ ಜಗಳವೇ ದೇವಸ್ಥಾನಕ್ಕೆ ಬೀಗ ಹಾಕುವ ದುಷ್ಕøತ್ಯಕ್ಕೆ ತಂದೊಡ್ಡಿರಬಹುದು ಎಂದು ಶಂಕಿಸಲಾಗಿದೆ. ಈ ಎರಡೂ ಗುಂಪಿನೊಂದಿಗೆ ಮಾತುಕತೆ ನಡೆಸಲು ಉಪಜಿಲ್ಲಾಧಿಕಾರಿಗಳು ತಮ್ಮ ಕಛೇರಿಯಲ್ಲಿ ಸಭೆ ಕರೆದಿದ್ದಾರೆ ಎನ್ನಲಾಗಿದೆ.
ಅದೇನೇ ಇದ್ದರೂ ಕೂಡ ಶ್ರೀ ಭೂಮಿಕಾ ದೇವಿಯ ನವರಾತ್ರಿ ಉತ್ಸವಕ್ಕೆ ವಿಘ್ನ ತಂತೊಡ್ಡುವುದು ಸರಿಯಲ್ಲಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಷ ವ್ಯಕ್ತವಾಗುತ್ತಿದೆ.