ಸುದ್ಧಿಕನ್ನಡ ವಾರ್ತೆ
Goa: ಕಳೆದ ಅನೇಕ ವರ್ಷಗಳಿಂದ ಗೋವಾ ರಾಜ್ಯದ ವಿವಿಧ ಇಲಾಖೆಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಕನ್ನಡಿಗರಾದ ಡಾ.ಸುರೇಶ್ ಶಾನಭೋಗ್(Dr. Suresh Shanbhogue ) ರವರಿಗೆ ಅತ್ಯುನ್ನತ ಗೌರವವಾದ 2024 ರ “ಅಶೋಕ” ಪ್ರಶಸ್ತಿ ಲಭಿಸಿದೆ.(Honour of Ashoka Award 2024 )

ನವದೆಹಲಿಯ ಇಂಡಿಯಾ ಹ್ಯಾಬಿಟೇಟ್ ಸೆಂಟರ್ ನಲ್ಲಿ ಸಪ್ಟೆಂಬರ್ 30 ರಂದು ಆಯೋಜಿಸಿದ್ದ ಬೃಹತ್ ಸಮಾರಂಭದಲ್ಲಿ ಡಾ.ಸುರೇಶ್ ಶಾನಭೋಗ್ ರವರಿಗೆ “ಅಶೋಕ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ.ಸುರೇಶ್ ಶಾನಭೋಗ್ ರವರು ಕಳೆದ ಅನೇಕ ವರ್ಷಗಳಿಂದ ಗೋವಾ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಿರ್ದೇಶಕರಾಗಿ ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಗಾಗಿ ಈ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.

ಡಾ.ಸುರೇಶ್ ಶಾನಭೋಗ್ ರವರಿಗೆ ಅಶೋಕ ಪ್ರಶಸ್ತಿ ಲಭಿಸಿರುವುದಕ್ಕೆ ಗೋವಾದ ವಿವಿದ ಕನ್ನಡಪರ ಸಂಘಟನೆಗಳು ಅಭಿನಂದನೆ ಸಲ್ಲಿಸಿದೆ. ನಿಸ್ವಾರ್ಥ ಸೇವೆ ಮತ್ತು ಸರಳ ವ್ಯಕ್ತಿತ್ವ ಹೊಂದಿರುವ ಡಾ.ಸುರೇಶ್ ಶಾನಭೋಗ್ ರವರಿಗೆ ಲಭಿಸಿರುವ “2024 ರ ಅಶೋಕ ಪ್ರಶಸ್ತಿ” ಗೋವಾ ಕನ್ನಡಿಗರಿಗೇ ಹೆಮ್ಮೆಯ ಸಂಗತಿಯಾಗಿದೆ. ಡಾ. ಸುರೇಶ್ ಶಾನಭೋಗ್ ಗೋವಾ ಸರ್ಕಾರದ ಉನ್ನತ ಉದ್ಧೆಯಾದ ಗಣಿ ಇಲಾಖೆಯ ನಿರ್ದೇಶಕರಾಗಿ, ನಾಗರೀಕ ವಿಮಾನಯಾನ ಇಲಾಖೆ ನಿರ್ದೇಶಕರಾಗಿ, ಪಿಪಿಪಿ ನಿರ್ದೇಕರಾಗಿ, ಯೋಜನಾ ನಿರ್ದೇಶಕರಾಗಿ,ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ, ಹೀಗೆ ಇನ್ನೂ ಹಲವು ಪ್ರಮುಖ ಹುದ್ಧೆಗಳಲ್ಲಿ ಸೇವೆ ಸಲ್ಲಿಸಿರುವುದು ಕೂಡ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.