ಸುದ್ಧಿಕನ್ನಡ ವಾರ್ತೆ
Goa: ಗೋವಾದ ಶಾಲೆಗಳಲ್ಲಿ ಮಧ್ಯಾನ್ಹದ ಬಿಸಿಯೂಟ ಪೂರೈಸುವ ಜವಾಬ್ದಾರಿ ಕರ್ನಾಟಕದ ಅಕ್ಷಯಪಾತ್ರ ಫೌಂಡೇಶನ್ ಗೆ ನೀಡಲಾಗಿದೆ. ಗೋವಾದಲ್ಲಿ ಎಲ್ಲ ಶಾಲೆಗಳಲ್ಲಿ ಕರ್ನಾಟಕದ ಬಿಸಿಯೂಟದ ಪರಿಮಳ ಹರಡುತ್ತಿದೆ.
ಗೋವಾದ ಕಾಣಕೋಣ ತಾಲೂಕಿನ ಸುಮಾರು 5,000 ವಿದ್ಯಾರ್ಥಿಗಳಿಗೆ ಮಧ್ಯಾನ್ಹದ ಬಿಸಿಯೂಟ ಪೂರೈಸಲು ಗೋವಾ ಸರ್ಕಾರವು ಬೆಂಗಳೂರಿನ ಅಕ್ಷಯಪಾತ್ರ ಫೌಂಡೇಶನ್ ನೊಂದಿಗೆ ಕರಾರು ಮಾಡಿಕೊಂಡಿದೆ. ಆದರೆ ಸ್ವಯಂಪಾಕ ಮತ್ತು ಇತರ ಮೂಲಭೂತ ಸೌಲಭ್ಯ ಸಿದ್ಧಪಡಿಸಲು 6 ತಿಂಗಳ ಕಾಲಾವಕಾಶವನ್ನು ಅಕ್ಷಯಪಾತ್ರ ಫೌಂಡೇಶನ್ ಕೋರಿತ್ತು. ಆದರೆ ಕಾಲಾವಧಿ ಪೂರ್ಣಗೊಂಡರೂ ಇದುವರೆಗೂ ಮೂಲ ಸೌಕರ್ಯ ನಿರ್ಮಾಣವಾಗದ ಕಾರಣ ರಾಜ್ಯ ಶಿಕ್ಷಣ ಇಲಾಖೆಯ ಬಳಿ ಅಕ್ವಯ ಪಾತ್ರ ಫೌಂಡೇಶನ್ ಇನ್ನೂ 3 ತಿಂಗಳ ಕಾಲಾವಕಾಶ ಕೋರಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಗೋವಾದ ಕಾಣಕೋಣದಲ್ಲಿ ಮಧ್ಯಾನ್ಹದ ಬಿಸಿಯೂಟ ಪೂರೈಸುತ್ತಿದ್ದ ಸ್ವಯಂಸೇವಾ ಸಂಘಟನೆಗಳು ಈ ಕಾರ್ಯ ಮುಂದುವರೆಸಲು ನಕಾರ ವ್ಯಕ್ತಪಡಿಸುತ್ತಿದ್ದರಿಂದ ಗೋವಾ ಸರ್ಕಾರವು ಬೆಂಗಳೂರಿನ ಅಕ್ಷಯಪಾತ್ರ ಫೌಂಡೇಶನ್ ನೊಂದಿಗೆ ಗೋವಾ ಸರ್ಕಾರವು ಗೋವಾದಲ್ಲಿ ಶಾಲೆಗಳಿಗೆ ಮಧ್ಯಾನ್ಹದ ಬಿಸಿಯೂಟ ನೀಡಲು ಕರಾರು ಮಾಡಿಕೊಂಡಿದೆ.