ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಹಾಗೂ ಕರ್ನಾಟಕ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿಗಳಾದ ಟಿ.ಎನ್ ಧ್ರುವಕುಮಾರ್ ರವರು ಗೋವಾದ ಸುಪುತ್ರ ಕೇರಳದ ರಾಜ್ಯಪಾಲರಾದ ರಾಜೇಂದ್ರ ಅರ್ಲೆಕರ್ ರವರನ್ನು ತಿರುವನಂತಪುರಂ ನಲ್ಲಿ ಭೇಟಿ ಮಾಡಿದರು.

ಟಿ.ಎನ್ ಧ್ರುವಕುಮಾರ್ ರವರು ಬರೆದ ಸಂಸದೀಯ ಸವಲತ್ತುಗಳ ಸುಳಿವುಗಳು ಎಂಬ ಪುಸ್ತಕವನ್ನು ರಾಜ್ಯಪಾಲರ ಬಳಿ ಪ್ರಸ್ತುತಪಡಿಸಿದರು.
ಧ್ರುವಕುಮಾರ್ ರವರು ಗೋವಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದಾಗ ಗೋವಾದಲ್ಲಿ ಕನ್ನಡಿಗರೊಂದಿಗೆ ಉತ್ತಮ ಬಾಂಧವ್ಯವನ್ನಿಟ್ಟುಕೊಂಡವರು.

ಇಂದಿಗೂ ಕೂಡ ಗೋವಾದ ವಿವಿಧ ಕನ್ನಡಪರ ಸಂಘಟನೆಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ.
ಈ ಹಿಂದೆಯೂ ಕೂಡ ಧ್ರುವಕುಮಾರ್ ರವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.