ಸುದ್ದಿ ಕನ್ನಡ ವಾರ್ತೆ
ಜೋಯಿಡಾದ : ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ದ ಯರಮುಖ ದ ಶ್ರೀ ಸೋಮೇಶ್ವರ ದೇವಸ್ಥಾನ ದಲ್ಲಿ ಕಾರ್ತಿಕ ಮಾಸದ ಅಂಗವಾಗಿ ದೀಪೋತ್ಸವ ಮತ್ತು ಭಕ್ತರಿಂದ ಭಜನೆ ನಡೆಸಲು ದೇವಸ್ಥಾನ ದ ಆಡಳಿತ ಮಂಡಳಿ ನಿರ್ಧರಿಸಿದ್ದು ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಮಂಜುನಾಥ್ ಬಾಗ್ವತ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.
ಆತ್ಮೀಯ ಗುಂದ ಸೀಮೆಯ ಸೋಮೇಶ್ವರನ ಸದ್ಭಕ್ತರೇ…..
ದೇವಸ್ಥಾನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾವಿಧಿಯಲ್ಲಿ ಬಂದಂತೆ ಶ್ರೀ ದೇವರಿಗೆ ದೀಪೋತ್ಸವ ಸೇವೆ ಅತ್ಯಂತ ಪ್ರಿಯವಾಗಿದ್ದು ಕಾರ್ತಿಕ ಮಾಸದಲ್ಲಿ ಅದನ್ನು ನಡೆಸುವಂತೆ ಸೂಚಿತವಾಗಿತ್ತು. ಅದರಂತೆ ಬರುವ ಸೋಮವಾರ ದಿನಾಂಕ 17 ರಂದು ಸಾಯಂಕಾಲ 6 ಗಂಟೆಯಿಂದ ದೀಪೋತ್ಸವ ಹಾಗೂ ಭಜನೆಯನ್ನು ನಡೆಸುವದೆಂದು ತೀರ್ಮಾನಿಸಲಾಗಿದೆ.
ಹಾಗಾಗಿ ಎಲ್ಲ ಸದ್ಭಕ್ತರೂ ಶ್ರದ್ಧೆಯಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಚಂದಗಾಣಿಸಿ ಕೊಟ್ಟು ದೇವರ ಅನುಗ್ರಹಕ್ಕೆ ಪಾತ್ರರಾಗ ಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.
– ಆಡಳಿತ ಮಂಡಳಿ ಶ್ರೀ ಸೋಮೇಶ್ವರ ದೇವಸ್ಥಾನ ಯರಮುಖ
