ಸುದ್ದಿ ಕನ್ನಡ ವಾರ್ತೆ
ಮಂಗಳೂರು :ಯಕ್ಷದ್ರುವ ಪಟ್ಲ ಫೌಂಡೇಶನ್ ನ ಅಧ್ಯಕ್ಷರು, ಯಕ್ಷದ್ರುವ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷರು ಆಗಿರುವ *ಶ್ರೀ ಪಟ್ಲ ಸತೀಶ್ ಶೆಟ್ಟಿಯವರು ಅಮೇರಿಕಾದ 22 ದೇಶಗಳಲ್ಲಿ ನಡೆಸಿದ ಯಕ್ಷ ಯಾನದ ಯಶಸ್ವಿಗಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಪಟ್ಲ ಸತೀಶ್ ಶೆಟ್ಟಿ ದಂಪತಿಗಳನ್ನು ಕಾವೂರು ಶ್ರೀ ಹಿಲ್ ಸೈಡ್ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಿದರು.*
ಈ ಸಂದರ್ಭದಲ್ಲಿ ಒಕ್ಕೂಟದ ಪೋಷಕರು ಹಾಗೂ ಪಟ್ಲ ಫೌಂಡೇಶನ್ ನ ಮಾರ್ಗದರ್ಶಕರಾದ ಸವಣೂರು ಸೀತಾರಾಮ್ ರೈ, ಸುಧಾಕರ್ ಪೂಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ರವಿರಾಜ್ ಶೆಟ್ಟಿ ನಿಟ್ಟೆಗುತ್ತು,ಸಂತೋಷ್ ಕುಮಾರ್ ಶೆಟ್ಟಿ, ಲೋಕೇಶ್ ಭರಣಿ, ಪುರುಷೋತ್ತಮ್ ಭಂಡಾರಿ,ನಿರ್ಮಿತಿ ಶೆಟ್ಟಿ, ರವಿಚಂದ್ರ ಶೆಟ್ಟಿ, ಕೊಲ್ಲಾಡಿ ಬಾಲಕೃಷ್ಣ ರೈ, ಆರತಿ ಆಳ್ವ, ತನುಜ ಕೆ.ಅಡ್ಯoತಾಯ ಮತ್ತು ಇನ್ನಿತರರು ಉಪಸ್ಥಿತರಿದ್ದರು.