ಸುದ್ದಿ ಕನ್ನಡ ವಾರ್ತೆ
ಗೋಕರ್ಣ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾದನಗೇರಿ (ಕುಮಟಾ )ಇಲ್ಲಿ ಪೋಷಕ – ಶಿಕ್ಷಕರ ಮಹಾಸಭೆ ನಡೆಯಿತು.ಅಂದಿನ ಸಭೆಯಲ್ಲಿ ದಾಖಲಾತಿ ಹೆಚ್ಚಳ,ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ,ಹಾಜರಾತಿ ಮತ್ತು ಮೂಲಭೂತ ಸೌಕರ್ಯಗಳ ಕುರಿತು ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರಾದ ದಿನಕರ ಶೆಟ್ಟಿ ಅವರು ಆಗಮಿಸಿ ಪಾಲಕ ಪೋಷಕರಿಗೆ ಶಿಕ್ಷಣದ ಮಹತ್ವ ತಿಳಿಸಿ ತಮಗೆ ಶಾಲೆಯ ಮೇಲಿರುವ ಅಭಿಮಾನವನ್ನು ನೆರೆದ ಶಾಲೆಯ ಪಾಲಕ /ಪೋಷಕರ ಜೊತೆ ಹಂಚಿಕೊಂಡರು.

ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಹಕರಿಸುತ್ತಿರುವ ಮಾನ್ಯ ಶಾಸಕರಿಗೆ ಶಾಲಾ ಎಸ್. ಡಿ.ಎಂ.ಸಿ ,ಪಾಲಕ – ಪೋಷಕರು ಮತ್ತು ಊರ ನಾಗರಿಕರು ಅಭಿನಂದಿಸಿದರು.
ಸಭೆಯಲ್ಲಿ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಮಂಜುನಾಥ ಎಲ್ ನಾಯ್ಕ, ಗ್ರಾ.ಪಂ.ಸದಸ್ಯರಾದ ಮಹೇಶ ನಾಯಕ,ಸಿ.ಆರ್. ಪಿ ಗಳಾದ ರೋಹಿದಾಸ ನಾಯಕ ಉಪಸ್ಥಿತರಿದ್ದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ಆಚಾರಿ ಸಭೆಯ ಉದ್ದೇಶ ಮತ್ತು ಪ್ರಾಸ್ತಾವಿಕ ಮಾತಾಡಿ ಎಲ್ಲರನ್ನೂ ಸ್ವಾಗತಿಸಿದರು. ಕಾವ್ಯ ಎಸ್. ಬಿ.ನಿರೂಪಿಸಿದರು.ಮಕ್ಕಳ ದಿನಾಚರಣೆಯ ನಿಮಿತ್ತ ಪಾಲಕ ಪೋಷಕರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಮನರಂಜನಾ ಆಟಗಳನ್ನು ಆಡಿಸಲಾಯಿತು.ಶಿಕ್ಷಕರಾದ ನಿತ್ಯಾನಂದ ನಾಯ್ಕ, ಸಂಧ್ಯಾ ನಾಯ್ಕ, ಚಂದ್ರಕಲಾ ಗೌಡ, ಗೀತಾ ನಾಯ್ಕ,ರಾಜೇಶ್ವರಿ ಗಾವಡಿ ಸಹಕರಿಸಿದರು.