ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 16 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಪಣಜಿ ಕಾಂಪಲ್ ಬಾಲಭವನದಲ್ಲಿ “ಕರುನಾಡ ಸ್ವರಸಿರಿ ವೈಭವ”-2025 ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉಧ್ಘಾಟನೆಯನ್ನು ಬೈನಾ-ವಾಸ್ಕೊ ಶ್ರೀ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಮುಖ್ಯೋಪಾಧ್ಯಾಯರಾದ ಪಿ.ವ್ಹಿ.ಪಾಟೀಲ್ ನೆರವೇರಿಸಲಿದ್ದಾರೆ. ಪಣಜಿ ಕೆಫೆ ಬೆಂಗಳೂರು ಮಾಲೀಕ ಸಂತೋಷ ಮುಖ್ಯ ಅತಿಥಿಗಳಾಗಿ , ಗೌರವ ಅತಿಥಿಗಳಾಗಿ ಒಮಿಡಾ ಡಾನ್ಸ ಮತ್ತು ಫಿಟ್ನೆಸ್ ಪಣಜಿ ಸಂಸ್ಥಾಪಕರಾದ ಅಂಜು ದೇಸಾಯಿ ಉಪಸ್ಥಿತರಿರುವರು.
ವಾಣಿಶ್ರೀ ಮತ್ತು ತಂಡದವರಿಂದ ನಾಡಗೀತೆ, ಸಚಿನ್ ಶಿರೋಳ್ ಮತ್ತು ತಂಡ ವಾಸ್ಕೊ ರವರಿಂದ ನಿತ್ಯೋತ್ಸವ ಗೀತೆ ಕಾರ್ಯಕ್ರಮ ಜರುಗಲಿದೆ.
“ಬದುಕಿನಲ್ಲಿ ಭಾಷೆ ಮತ್ತು ಹಾಸ್ಯ ” ವಿಷಯದ ಮೇಲೆ ಮನು ಹಂದಾಡಿ ಇವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಕ್ಕೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಗೋವಾ ಕನ್ನಡ ಸಮಾಜ ಪಣಜಿ ಅಧ್ಯಕ್ಷ ಅರುಣ್ ಕುಮಾರ್ , ಕಾರ್ಯದರ್ಶಿ ಶ್ರೀಕಾಂತ ಲೋಣಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಚಿತ್ರಕಲಾ ಸ್ಪರ್ಧೆ ಆಯೋಜನೆ…
ಗೋವಾ ಕನ್ನಡ ಸಮಾಜ ಪಣಜಿ ಸಂಸ್ಥೆಯ ಮಾಣಿಕ್ಯ ಮಹೋತ್ಸವ,. ಸಲುವಾಗಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದೆ..(Drawing compitation) ಭಾಗವಹಿಸುವ ಮಕ್ಕಳು ದಿನಾಂಕ 16-11 -2025 ಬರುವ ಭಾನುವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಪಣಜಿಯ ಕಂಪಾಲ್ ಹತ್ತಿರವಿರುವ *ಬಾಲಭವನದಲ್ಲಿ* ಬಂದು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಭಾಗವಹಿಸುವವರು.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗೆ ಸಂಪರ್ಕ ಮಾಡಬೇಕಾಗಿ ಮನವಿ..
9226545079
9860998528
