ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಾಣಕೋಣದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಮಠ ಪ್ರಸಕ್ತ ವರ್ಷ 550 ವರ್ಷ ಪೂರ್ಣಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 7 ರ ವರೆಗೆ 10 ದಿನಗಳ ಕಾಲ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ 10 ದಿನಗಳಲ್ಲಿ ಪರ್ತಗಾಳಿ ಮಠದಲ್ಲಿ 1 ನಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳವ ನಿರೀಕ್ಷೆಯಿದೆ. ನವೆಂಬರ್ 28 ರಂದು ಶ್ರೀ ರಾಮನ ಕಂಚಿನ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉಧ್ಘಾಟನೆ ನೆರವೇರಿಸಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಸುಮಾರು 30,000 ಜನ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.
ಸದ್ಯ ಮಠದಲ್ಲಿ ಈ 10 ದಿನಗಳ ಉತ್ಸವಕ್ಕಾಗಿ ಸಿದ್ಧತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಗಮಿಸಲಿರುವ ಭಕ್ತಾದಿಗಳಿಗೆ ವ್ಯವಸ್ಥೆ ಕಲ್ಪಿಸಲು ಪ್ರತ್ಯೇಕ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ. ಈ 10 ದಿನಗಳ ಉತ್ಸವದಲ್ಲಿ ಪ್ರತಿದಿನ ಸುಮಾರು 10,000 ಜನ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಗೋವಾದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಮಠದ 550 ನೇಯ ವರ್ಷದ ವರ್ಧಂತಿ ಉತ್ಸವದ ಕಾರ್ಯಕ್ರಮದಲ್ಲಿ ದೇಶಾದ್ಯಂತ ವಿವಿಧ ಮಠಗಳ ಮಠಾಧಿಪತಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾಲಮಾರು ಮಠದ ಮಠಾಧಿಪತಿಗಳಾದ ಶ್ರೀಮದ್ ವಿದ್ಯಾಧಿರಾಜೇಶ್ವರ ತೀರ್ಥ ಸ್ವಾಮೀಜಿ, ಕಾಶಿ ಮಠದ ಶ್ರೀಮದ್ ಸನ್ಮ್ಯಾಮಿಂದ್ರ ತೀರ್ಥ ಸ್ವಾಮೀಜಿ, ಶ್ರೀಸಂಸ್ಥಾನ ಗೌಡಪಾದಾಚಾರ್ಯ ಜಕವಳೇ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀಜಿ, ಚಿತ್ರಾಪುರ ಮಠಾಧೀಶ ಶ್ರೀಮದ್ ಸಧ್ಯಜ್ಯೋತ ಶಂಕರಾಶ್ರಮ ಸ್ವಾಮೀಜಿ, ರವರು ಉಪಸ್ಥಿತರಿರಲಿದ್ದಾರೆ.
ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಮಠದ 550 ನೇಯ ವರ್ಧಂತಿ ಉತ್ಸವದ ನಿಮಿತ್ತ ಪರ್ತಗಾಳಿ ಮಠದ ಪರಿಸರದಲ್ಲಿ ಸ್ಥಾಪಿಸಲಾಗುವ ಶ್ರೀರಾಮನ 77 ಅಡಿ ಎತ್ತರದ ಮೂರ್ತಿ ಆಕರ್ಷಣೆ ಹೆಚ್ಚಲಿದ್ದು ದಕ್ಷಿಣ ಭಾರತದ ಅತ್ಯಂತ ಎತ್ತರದ ಶ್ರೀರಾಮನ ಮೂರ್ತಿ ಇದಾಗಲಿದೆ.
ಶ್ರೀರಾಮನ ಮೂರ್ತಿಯನ್ನು ಕರ್ನಾಟಕದಲ್ಲಿ ಹಂತ ಹಂತವಾಗಿ ಸಿದ್ಧಪಡಿಸಿ ಶ್ರೀಮಠಕ್ಕೆ ತರಲಾಗುತ್ತಿದೆ. ಸದ್ಯ ಶ್ರೀರಾಮನ ಮೂರ್ತಿಯನ್ನು ಮಠಕ್ಕೆ ತಂದು ನಿಗದಿತ ಸ್ಥಳದಲ್ಲಿ ಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ನವೆಂಬರ್ 20 ರವರೆಗೆ ಈ ಮೂರ್ತಿಯ ಸಂಪೂರ್ಣ ಸಿದ್ಧತಾ ಕಾರ್ಯ ಪೂರ್ಣಗೊಳ್ಳಲಿದೆ. ನವೆಂಬರ್ 28 ರಂದು ಪ್ರಧಾನಿ ಮೋದಿ ಶ್ರೀರಾಮನ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ.
ಸಾರ್ಥ ಪಂಚ ಶತಾಬ್ದಿ ಮಹೋತ್ಸದ ನಿಮಿತ್ತ ನವೆಂಬರ್ 27 ರಂದು ಪಾಲೀಮಾರು ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ರವರ ಪಟ್ಟದಶಿಷ್ಯ ಶ್ರೀಮದ್ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ , ಡಿಸೆಂಬರ್ 4 ರಂದು ಕವಳೆ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀಜಿ ಹಾಗೂ ಚಿತ್ರಾಒಉರ ಮಠಾಧೀಶ ಶ್ರೀಮದ್ ಸಧ್ಯೋಜಾತ ಶಂಕರಾಶ್ರಮ ಸ್ವಾಮೀಜಿ ರವರು ಉಪಸ್ಥಿತರಿರಲಿದ್ದಾರೆ.
ನವೆಂಬರ್ 27 ಮತ್ತು 28 ರಂದು ಬೆಳಿಗ್ಗೆ 6.30 ರಿಂದ 7.30 ರವರೆಗೆ ಶಿಬಿಕೋತ್ಸವ, ನವೆಂಬರ್ 29 ರಂದು ರಾಮ ಕಲ್ಯಾಣೋತ್ಸವ ಹಾಗೂ ಶ್ರೀರಾಮ ಪಟ್ಟಾಭೀಷೇಕ ಮಹೋತ್ಸವ, ಡಿಸೆಂಬರ್ 2 ರಂದು ದ್ವಾದಶ ಸ್ತೋತ್ರ ಪೂಜೆ, 3 ರಂದು ಮಖರೋತ್ಸವ, 4 ರಂದು ಶಿಭಿಕೋತ್ಸವ, 5 ರಂದು ನೌಕಾವಿಹಾರ, 7 ರಂದು ಶಿಭಿಕೋತ್ಸವ ಹಾಗೂ ಅಷ್ಠಾವದಾನ ಸೇವೆ ನಡೆಯಲಿದೆ. ಡಿಸೆಂಬರ್ 4 ರಂದು ಬೆಳಿಗ್ಗೆ 9 ರಿಂದ 10 ಗಂಟಯ ವರೆಗೆ ಮಠ ಪರಿಸರದಲ್ಲಿ ವೃಕ್ಷಾರೋಪಣ, 5 ರಂದು ಯೋಗ ಶಿಭಿರ, 7 ರಂದು ವೈದ್ಯಕೀಯ ಶಿಭಿರ, 8 ರಂದು ಸ್ವಚ್ಛ ಪರ್ತಗಾಳಿ ಅಭಿಯಾನ , ನವೆಂಬರ್ 28 ರಂದು ಪ್ರಧಾನಿಗಳಿಂದ ಶ್ರೀರಾಮನ ಮೂರ್ತಿ ಅನಾವರಣ ಕಾರ್ಯಕ್ರಮ ನಡೆಯಲಿದೆ.
