ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ದಿನಾಂಕ:11-11-2025 ರ ಮಂಗಳವಾರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀಮದ್ ಆನಂದ ಭೋಧೇಂದ್ರ ಸರಸ್ವತಿ ಮಹಾಸ್ವಾಮಿಗಳು ಇವರ ಕೃಪಾಶಿರ್ವಾದೊಂದಿಗೆ ಮಾತೆಯರ ಸಮಾವೇಶ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ಕೇಂದ್ರ ಮಾತೃಮಂಡಲದ ಅಧ್ಯಕ್ಷರಾದ ಗೀತಾ ಆರ್ ಹೆಗಡೆಯವರು ಉದ್ಘಾಟಿಸಿ ಧರ್ಮಶೃದ್ಧೆಯುಳ್ಳ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಗಳಾಗೋಣ,ಹಾಗೆಯೇ ಆಚರಿಸೋಣ,ಆ ಮೂಲಕ ಶ್ರೀಮಠದ ಆದೇಶವನ್ನು ಪಾಲಿಸುವುದರ ಮೂಲಕ ಗುರು ಕೃಪೆಗೆ ಪಾತ್ರರಾಗೋಣ ಎಂದರು.5 ವರ್ಷ ಮಾತೃಮಂಡಲದ ಕಾರ್ಯದರ್ಶಿಗಳಾಗಿ,5 ವರ್ಷ ಮಾತೃಮಂಡಲದ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸದ ಗುಂದ ಮಾತೃಮಂಡಲದ ಅಧ್ಯಕ್ಷರಾದ ಸೀತಾ ದಾನಗೇರಿಯವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು. ನಂತರ ಕಾರ್ಯಕ್ರಮದಲ್ಲಿ ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಶ್ಯಾಮಲಾ ಕಮಲಾಕರ ಹೆಗಡೆ ಯೋಗ ಶಿಕ್ಷಕರು ಇವರಿಂದ ಮಹಿಳೆಯರ ಆರೋಗ್ಯ ಮತ್ತು ಯೋಗ ವಿಷಯದ ಕುರಿತು ಮಾತನಾಡುತ್ತಾ ಯೋಗದಿಂದ ಉತ್ತಮ ಆರೋಗ್ಯ ಎಂಬುದರ ಕುರಿತು ಅತ್ಯುತ್ತಮವಾಗಿ ಹೇಳಿದರು. ನೇತ್ರಾವತಿ ವೆಂಕಟ್ರಮಣ ಹೆಗಡೆ ಕೆಂಚಗದ್ದೆ ಅಧ್ಯಕ್ಷರು ಮಾತೃಮಂಡಲ ಶಿರಸಿ ಸೀಮೆ ಕೃಷಿಯೊಂದಿಗೆ ಸಂಸ್ಕಾರಯುತ ಸಮೃದ್ಧ ಬದುಕು ನಿರ್ವಹಣೆಯಲ್ಲಿ ಮಹಿಳೆ ವಿಷಯದ ಕುರಿತು ಉಪನ್ಯಾಸವನ್ನು ಮಾತೆಯರ ಮನಮುಟ್ಟುವಂತೆ ಹೇಳಿದರು.

ಭೋಜನ ವಿರಾಮದ ನಂತರ ಮಧ್ಯಾಹ್ನ ಸುಮಂಗಲಾ ವಿಶ್ವನಾಥ ಹೆಗಡೆ ಪಾರಂಪರಿಕ ವೈದ್ಯರು ಶಿರಸಿ,ಮನೆ ಮದ್ದಿನೊಂದಿಗೆ ಆರೋಗ್ಯಕರ ಜೀವನ ವಿಷಯದ ಉಪನ್ಯಾಸವನ್ನು ಉತ್ತಮವಾಗಿ ನಡೆಸಿಕೊಟ್ಟರು. ನಂತರ ಗುಂದ ಮಾತೃಮಂಡಲದ ನಿಕಟಪೂರ್ವ ಮಾಜಿ ಅಧ್ಯಕ್ಷರುಗಳಾದ ಗಿರಿಜಾ ಆರ್ ಭಟ್ಟ,ಸಂಧ್ಯಾ ದೇಸಾಯಿ,ರಾಧಾ ಹೆಗಡೆಯವರಿಗೆ ಮಾತೃಮಂಡಲದ ವತಿಯಿಂದ ಗೌರವ ಸಂಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಊರಿನ ಮಾತೆಯರಾದ ಕುಸುಮಾ ಹೆಗಡೆ,ಸಂಜೀವಿನಿ ದೇಸಾಯಿ,ಗೌರಿ. ಎಸ್. ಭಟ್ಟ,ಭಾಗೀರಥಿ ಭಟ್ಟ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಮಾತೃಮಂಡಲದ ಅಧ್ಯಕ್ಷರಾದ ಸೀತಾ ದಾನಗೇರಿಯವರು ತನ್ನೇಲ್ಲ ಕಾರ್ಯ ಚಟುವಟಿಕೆಯಲ್ಲಿ ಸಹಕಾರ ನೀಡಿದ ಊರ ಹಿರಿಯರನ್ನು,ಮಾತೃಮಂಡಲದ ಸದಸ್ಯರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ ನುಡಿದಂತೆ ನಡೆದು ಮಾದರಿ ಬದುಕನ್ನು ನಮ್ಮದಾಗಿಸಿ ಕೊಳ್ಳೋಣ ಎಂದರು,ಹಾಗೆ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ,ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಊರಿನ ಹಿರಿಯ ದಂಪತಿಗಳಾದ ಎಸ್.ಎಸ್.ಭಟ್ಟ ದಂಪತಿಗಳ ಸದಾಶಯದಂತೆ ಸೀತಾ ದಾನಗೇರಿ ವಿರಚಿತ ಅಭಿಜಾತೆ ಭಾಗ -1 ಎಂಬ ಪುಸ್ತಕವನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಮಾತೆಯರಿಗೆ ನೀಡಲಾಯಿತು.ಮಾತೃಮಂಡಲದ ಉಪಾಧ್ಯಕ್ಷರಾದ ಗೀತಾ ಭಾಗವತ ಕಾರ್ಯಕ್ರಮವನ್ನು ನಿರೂಪಿಸಿದರು.ಮಹಿಮಾ ಭಾಗವತ ಪ್ರಾರ್ಥನೆ ಮಾಡಿದರು.ಸುಜಾತಾ ದಾನಗೇರಿಯವರು ಕಾರ್ಯಕ್ರಮದ ಸ್ವಾಗತ ಹಾಗೂ ಕೊನೆಯಲ್ಲಿ ವಂದನಾರ್ಪಣೆಗೈದರು.ಮಾತೆಯರೆಲ್ಲ ಸೇರಿ ಭಾರತ ಮಾತೃಷ್ಟಕವನ್ನು ಹೇಳುವದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.