ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) 100 ನೇಯ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಭಾನುವಾರ ಮಧ್ಯಾನ್ಹ ಪಥಸಂಚಲನ ನಡೆಸಲಾಯಿತು.
RSS ಸಂಘದ ಗಣವೇಷದಲ್ಲಿ ಸುಮಾರು 2000 ಕ್ಕೂ ಹೆಚ್ಚು ಜನರು ಈ ಈ ಪಥಸಂಚಲನದಲ್ಲಿ ಪಾಲ್ಗೊಂಡು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿ ಮೆರವಣಿಗೆ ದೇಶಭಕ್ತಿ ಹೆಚ್ಚಿಸುವಂತೆ ಸಾಗಿದ್ದು ಎಲ್ಲರ ಗಮನ ಸೆಳೆಯಿತು.
ಯಲ್ಲಾಪುರದ ವೈಟಿಎಸ್ ಎಸ್ ಕಾಲೇಜು ಮೈದಾನದಲ್ಲಿ ಸೇರಿದ್ದ ಆರ್ ಎಸ್ ಎಸ್ ಕಾರ್ಯಕರ್ತರು ಧ್ವಜವಂದನೆ ಸಲ್ಲಿಸಿ ಸಾಮೂಹಿಕವಾಗಿ ನಮಸ್ತೇ ಸದಾ ವತ್ಸಲೇ ಮಾತೃಭೂಮೆ ಎಂಬ ಆರ್ ಎಸ್ ಎಸ್ ಗೀತೆಯನ್ನು ಭಕ್ತಿ ಪೂರ್ವಕವಾಗಿ ಹಾಡಿದರು. ನಂತರ ಯಲ್ಲಾಪುರದ ಗಲ್ಲಿ ಗಲ್ಲಿಗಳಲ್ಲಿ ಪಥಸಂಚಲನ ಸಾಗಿತು. ಸಾರ್ವಜನಿಕರು ಕೂಡ ಈ ಪಥಸಂಚಲನಕ್ಕೆ ಗೌರವ ಸಲ್ಲಿಸಿದರು.
ಮೆರವಣಿಗೆಯಲ್ಲಿ ಸುಶ್ರಾವ್ಯ ಬ್ಯಾಂಡ್ ಗೆ ಕಾರ್ಯರ್ತರು ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು.
