ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಪೋಟೋಲಿಯ ಮಿರಾಶಿಯವರ ಮನೆಯಲ್ಲಿ ತುಳಸಿ ವಿವಾಹ ಹಾಗೂ ದಹಿಕಾಲ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ಗ್ರಾಮದ ಪುರುಷರು ಮಹಿಳೆಯರು, ಯುವಕರು, ಯುವತಿಯರು,ಬಾಲಕರು,ಬಾಲಕಿಯರು ಒಂದೇ ಕಡೆ ಸೇರಿ ತುಳಸಿ ವಿವಾಹ ಕಾರ್ಯಕ್ರಮದಲ್ಲಿ ಸಡಗರ ಸಂಭ್ರಮದಿಂದ ಭಾಗವಹಿಸಿದರು. ನಂತರ ತುಳಸಿ ಕಟ್ಟೆಯ ಸುತ್ತ ವಾದ್ಯಗಳೊಂದಿಗೆ ದೇವರ ಹಾಡುಗಳನ್ನು ಹಾಡುತ್ತಾ, ಮುಖವಾಡ ಧರಿಸಿದ ವ್ಯಕ್ತಿಗಳು ನೃತ್ಯ ಮಾಡುತ್ತಾ ಪ್ರದಕ್ಷಣೆ ಹಾಕಿದರು. ನಂತರ ಮಂಡಕ್ಕಿಗೆ,ಕೊಬ್ಬರಿ,ಬೆಲ್ಲ ಸೇರಿದಂತೆ ಇನ್ನಿತರ ವಸ್ತುಗಳಿಂದ ಮಿಶ್ರಣ ಮಾಡಿ ವಿಜ್ರಂಭಣೆಯಿಂದ ದಹಿಕಾಲ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪುರುಷರು, ಯುವಕರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಹಿಳೆಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.