ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ದಿನಾಂಕ:11-11-2025 ರ ಮಂಗಳವಾರ ಬೆಳಿಗ್ಗೆ 10-00 ಗಂಟೆಗೆ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀಮದ್ ಆನಂದ ಭೋಧೇಂದ್ರ ಸರಸ್ವತಿ ಮಹಾಸ್ವಾಮಿಗಳು ಇವರ ಕೃಪಾಶಿರ್ವಾದೊಂದಿಗೆ ಮಾತೆಯರ ಸಮಾವೇಶ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ವೇದಿಕೆಯ ಕಾರ್ಯಕ್ರಮ,ಉಪನ್ಯಾಸ ಕಾರ್ಯಕ್ರಮಗಳು,ಶ್ಯಾಮಲಾ ಕಮಲಾಕರ ಹೆಗಡೆ ಯೋಗ ಶಿಕ್ಷಕರು ಇವರಿಂದ ಮಹಿಳೆಯರ ಆರೋಗ್ಯ ಮತ್ತು ಯೋಗ ವಿಷಯದ ಕುರಿತು,ನೇತ್ರಾವತಿ ವೆಂಕಟ್ರಮಣ ಹೆಗಡೆ ಕೆಂಚಗದ್ದೆ ಅಧ್ಯಕ್ಷರು ಮಾತೃಮಂಡಲ ಶಿರಸಿ ಸೀಮೆ ಕೃಷಿಯೊಂದಿಗೆ ಸಂಸ್ಕಾರಯುತ ಸಮೃದ್ಧ ಬದುಕು ನಿರ್ವಹಣೆಯಲ್ಲಿ ಮಹಿಳೆ ವಿಷಯದ ಕುರಿತು ಉಪನ್ಯಾಸ ನೀಡುವರು.
ಭೋಜನ ವಿರಾಮದ ನಂತರ ಮಧ್ಯಾಹ್ನ 3-00ರಿಂದ ಸುಮಂಗಲಾ ವಿಶ್ವನಾಥ ಹೆಗಡೆ ಪಾರಂಪರಿಕ ವೈದ್ಯರು ಶಿರಸಿ,ಮನೆ ಮದ್ದಿನೊಂದಿಗೆ ಆರೋಗ್ಯಕರ ಜೀವನ ವಿಷಯದ ಉಪನ್ಯಾಸ ಕಾರ್ಯಕ್ರಮ. ನಂತರ ಗುಂದ ಮಾತೃಮಂಡಲದ ನಿಕಟಪೂರ್ವ ಅಧ್ಯಕ್ಷರುಗಳಿಗೆ ಗೌರವ ಸಂಮಾನ ಕಾರ್ಯಕ್ರಮ, ಭಾರತ ಮಾತೃಷ್ಟಕದೊಂದಿಗೆ ಕಾರ್ಯಕ್ರಮ ಮುಕ್ತಾಯ. ಸರ್ವರಿಗೂ ಆತ್ಮೀಯವಾಗಿ ಸ್ವಾಗತಿಸುವವರು ಗುಂದ ಮಾತೃಮಂಡಲದ ಸರ್ವ ಸದಸ್ಯರು.
