ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನಲ್ಲಿ ಪೊಲೀಸ್ ಇಲಾಖೆ ಯ ಕಾರ್ಯ ಜನರಿಗೆ ಮೆಚ್ಚುಗೆ ಯಾಗಿದೆ. ಯಾವುದೇ ಅಳುಕಿಲ್ಲದೆ ಇಲಾಖೆಯನ್ನು ಸಂಪರ್ಕಿಸುವಷ್ಟು ವಿಶ್ವಾಸ ಇಲಾಖೆ ಯ ಮೇಲೆ ಜನತೆ ಇಟ್ಟಿದ್ದಾರೆ ಅದನ್ನು ಪೊಲೀಸ್ ಇಲಾಖೆ ಕೂಡ ಉಳಿಸಿ ಕೊಂಡಿದೆ.
ಹಾಗಾಗಿ ಜನತೆ ತಮ್ಮ ನೋವನ್ನು ತೋಡಿ ಕೊಂಡಾಗ ಇಲಾಖೆ ಉಳಿಸಿ ಕೊಂಡಿದೆ ಕಳೆದ ಮಾರ್ಚ್ ತಿಂಗಳು ಪಿ ಯು ಸಿ ಪರೀಕ್ಷೆ ನಡೆದಾಗ ಸ್ಥಳೀಯ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಕಾಲೇಜಿನ ಪ್ರಾಚಾರ್ಯ ರಾದ ಪ್ರಕಾಶ ತಗಡಿನಮನಿ ಅವರು ತಮ್ಮ ಮೊಬೈಲ್ ನ್ನು ಕಳೆದುಕೊಂಡಿದ್ದರು ಅಲ್ಲದೇ ಇದರಿಂದ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು.
ಅವರು ತಡ ಮಾಡದೇ ಜೋಯಿಡಾ ಪೊಲೀಸ್ ಠಾಣೆ ಗೆ ದೂರು ನೀಡಿದರು. ಕೂಡಲೇ ಜೋಯಿಡಾ ಪಿಎಸ್ಐ ಮಹೇಶ ಮಾಳಿ ಮೊಬೈಲ್ ತನಿಖೆ ಕೈ ಕೊಂಡರು. ಹಲವಾರು ವಿದದಿಂದ, ಜೊತೆಗೆ ಸಿ ಸಿ ಐ ಆರ್ ಪೋರ್ಟಲ್ ಮೂಲಕ ತನಿಖೆ ನಡೆಸಿದಾಗ ಮೊಬೈಲ್ ಪತ್ತೆ ಆಯಿತು. ಪತ್ತೆಯಾದ ಮೊಬೈಲನ್ನು ಶನಿವಾರ ಕಾಲೇಜಿನ ಪ್ರಾಚಾರ್ಯ ಪ್ರಕಾಶ ತಗಡಿನಮನಿ ಅವರಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ತುಂಬಾ ಸಂತಸ ಪಟ್ಟ ಪ್ರಕಾಶ ಅವರು ತಮ್ಮ ಮೊಬೈಲ್ ದೊರಕಿಸಿ ಕೊಡುವಲ್ಲಿ ಸಹಕಾರ ನೀಡಿದ ಪಿಎಸ್ಐ ಮಹೇಶ ಮಾಳಿ, ಪೊಲೀಸ್ ಅಖಿಲೇಶ್ ಮತ್ತು ಇಲಾಖೆಯ ಎಲ್ಲರಿಗೂ ಅಭಿನಂದಿಸಿದ್ದಾರೆ.
