ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಷ್ಟೀಯ ಸ್ವಯಂಸೇವಕ ಸಂಘ ಜೋಯಿಡಾ ವತಿಯಿಂದ ನಡೆದ ಸಂಘ ಶತಾಭ್ದಿಯ ನಿಮಿತ್ತ ವಿಜಯ ದಶಮಿ ಉತ್ಸವ ಕಾರ್ಯಕ್ರಮ ದಿನಾಂಕ:08 – 11- 2025 ರ ಶನಿವಾರ ಮಧ್ಯಾಹ್ನ 2-15 ಗಂಟೆಗೆ,ಸಂಪತ್ ಸ್ಥಳ ಬಾಬು ಜಗಜೀವನರಾಂ ಸಭಾಭವನ ಎದುರು ಭವ್ಯ ಪಥಸಂಚಲನ ಪ್ರಾರಂಭವಾಗಿ ಅದೇ ಸ್ಥಳದಲ್ಲಿ ಯಶಸ್ವಿ ಸಂಪನ್ನಗೊಂಡಿತು.

ಸಭಾ ಕಾರ್ಯಕ್ರಮದ ಮೊದಲು ಜೋಯಿಡಾದ ಕೇಂದ್ರ ಸ್ಥಳದಲ್ಲಿ,ಪ್ರಮುಖ ಬೀದಿಗಳಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಮಾತೆಯರು ಮನೆಯ ಮುಂದೆ ರಂಗೋಲಿಯನ್ನು ಹಾಕಿ,ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಬಾಬುಜಗಜೀವನರಾಂ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವೈಯುಕ್ತಿಕ ಗೀತೆ,ಅಮ್ರತ ವಚನ ವಾಚನ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಹರಿಜನ ಉಪಸ್ಥಿತರಿದ್ದರು.

ಮುಖ್ಯ ವಕ್ತಾರರಾಗಿ ಆಗಮಿಸಿದ ಗಣಪತಿ ಹಿರೇಸರ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ರಾಷ್ಟ್ರೀಯ ಸ್ವಯಂಸೇವಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಹೋದರರು,ಸಹೋದರಿಯರು, ಶ್ರದ್ಧೆಯ ತಾಯಂದಿರು,ಸಂಘದ ಹಿತೈಷಿಗಳು,ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.