ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಜೋಯಿಡಾ ದ ತಾಲೂಕಾ ಆಡಳಿತ ಸೌಧದಲ್ಲಿ ಸಂತ ಕವಿ ಕನಕ ದಾಸರ ಜಯಂತಿ ಯನ್ನು ಭಕ್ತಿ ಗೌರವ ಗಳೊಂದಿಗೆ ಆಚರಿಸಲಾಯಿತು.

ತಹಶೀಲ್ದಾರ್ ಮಂಜುನಾಥ್ ಮುನ್ನೊಳ್ಳಿ ಸಂತ ಕವಿ ಕನಕ ದಾಸರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು ಈ ಸಂದರ್ಭದಲ್ಲಿಅವರು ಮಾತನಾಡುತ್ತ ದೇಶ ಕಂಡ ಅಪ್ರತಿಮ ಕವಿಗಳು ಸಂತರು ಗಳಲ್ಲಿ ಕನಕ ದಾಸರೂ ಒಬ್ಬರು, ಅವರು ತೋರಿಸಿದ ದಾರಿ ಸ್ಮರಣಿಯ ವಾದದ್ಫು, ಕುಲ ಕುಲ ಕುಲ ವೆಂದು ಹೊಡೆದಾಡದಿರಿ ಎಂದು ಆ ಕಾಲದಲ್ಲೇ ನಮಗೆತಿಳುವಳಿಕೆ ಹೇಳಿದ್ದರು, ಸಂತರು ಕವಿಗಳು ಆಗಿ ಹೋಗಿರುವ ನಮ್ಮ ದೇಶದಲ್ಲಿ ಅವರು ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶನ ಮಾಡಿಯೇ ಹೋಗಿದ್ದಾರೆ ಅವರ ಮಾರ್ಗದರ್ಶನ ದಲ್ಲಿ ಸಾಗಿದರೆ ಸಾಕು ನಮ್ಮ ಜೀವನ ಪಾವನ ವಾಗುತ್ತದೆ ಎಂದರು.

ತಾಲೂಕು ಪಂಚಾಯತ ಕಾರ್ಯ ನಿರ್ವಹಣಾ ಧಿಕಾರಿ ಎನ್ ಭಾರತಿ ಅವರು ಕನಕದಾಸರ ಬಾವ ಚಿತ್ರಕ್ಕೆ. ಪುಷ್ಪ ನಮನ ಮಾಡುವ ಮೂಲಕ ಗೌರವ ವoದನೆ ಸಲ್ಲಿಸಿ ಮಾತನಾಡಿ ಕನಕದಾಸರು ಹೇಗೆ ಸಂತರಾದರು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಆಡಳಿತ ಸೌದದಹಿರಿಕಿರಿಯ ಅಧಿಕಾರಿಗಳು ಸಿಬ್ಬಂದಿ ಗಳು ಉಪಸ್ಥಿತರಿದ್ದರು.