ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ರಾಮನಗರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಶಿಂದೋಳಿಯಲ್ಲಿ ಸಡಗರ ಸಂಭ್ರಮದಿಂದ ದಾಸಶ್ರೇಷ್ಠರಾದ ಕನಕದಾಸರ ಜಯಂತ್ಯುತ್ಸವವನ್ನು ಆಚರಿಸಲಾಯಿತು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಮಾತನಾಡಿ ಕನ್ನಡ ಸಾಹಿತ್ಯ ಕ್ಷೇತ್ರದ ಕೀರ್ತನಕಾರರು,ಸಂತಕವಿ ಕನಕದಾಸರ ಜೀವನ ಭೋದನೆಗಳು,ಕೀರ್ತನೆಗಳು, ಸಾಧನೆಗಳು,ಕಾವ್ಯಗಳ ಕುರಿತು ಮಾತನಾಡಿದರು,ಸಹ ಶಿಕ್ಷಕಿಯಾದ ವಿದ್ಯಾ ಮೇಡಂ ಕಾರ್ಯಕ್ರಮದಲ್ಲಿ ಕನಕದಾಸರ ಕುರಿತು ಮಾತನಾಡಿದರು.ಸಹ ಶಿಕ್ಷಕರಾದ ಆನಂದ .
ಪಿ.ಸ್ವಾಗತಿಸಿ,ನಿರೂಪಿಸಿ,ವಂದಿಸಿದರು.ಶಾಲೆಯ ವಿದ್ಯಾರ್ಥಿಗಳು ಕನಕದಾಸರ ಕುರಿತು ಭಾಷಣ ಗೀತೆಗಳನ್ನು ಹಾಡಿದರು.
