ಸುದ್ದಿ ಕನ್ನಡ ವಾರ್ತೆ
ಶಿರಸಿಯ:ನಗರದಲ್ಲಿ ದಿನಾಂಕ: 07/11/2025 ರಂದು ಬಿಜೆಪಿ ಜಿಲ್ಲಾ ಕಾರ್ಯಾಲಯ ಪಂಡಿತ ದೀನದಯಾಳ ಭವನದಲ್ಲಿ ವಂದೇ ಮಾತರಂ ಹಾಡಿನ 150 ನೇ ವಾರ್ಷಿಕೋತ್ಸವವನ್ನು ಆಯೋಜಿಸಲಾಯಿತು.
ಜಿಲ್ಲಾಧ್ಯಕ್ಷರಾದ ಎನ್ ಎಸ್ ಹೆಗಡೆಕರ್ಕಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾನ್ಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ,
ಸ್ವಾತಂತ್ರ್ಯ ಚಳುವಳಿಯಲ್ಲಿ ಸ್ವಾತಂತ್ರ ಹೋರಾಟಗಾರರಿಗೆ ಸ್ಪೂರ್ತಿದಾಯಕವಾದ, ಸರ್ದಾರ್ ವಲ್ಲಭ ಭಾಯ್ ಪಟೇಲ್ ರಿಗೆ ರಾಷ್ಟ್ರೀಯ ಏಕೀಕರಣದ ಪ್ರೇರಣಾ ಶಕ್ತಿಯಾಗಿರುವ, ಬಂಕಿಮಚಂದ್ರ ಚಟರ್ಜಿ ಅವರು 1875ರಲ್ಲಿ ರಚಿಸಿದ ವಂದೇ ಮಾತರಂ ಗೀತೆ ಇಂದಿನ ಯುವ ಪೀಳಿಗೆಗೆ ರಾಷ್ಟ್ರದ ಐಕ್ಯತೆಗಾಗಿ ಸದಾ ಸ್ಪೂರ್ತಿದಾಯಕವಾಗಿದೆ ಎಂದರು.
ನಗರ ಮಂಡಲ ಅಧ್ಯಕ್ಷರು ಆನಂದ ಸಾಲೇರ್, ಗ್ರಾಮೀಣ ಅಧ್ಯಕ್ಷರು ಉಷಾ ಹೆಗಡೆ, ಬನವಾಸಿ ಮಂಡಲ ಅಧ್ಯಕ್ಷರು ರಮೇಶ ನಾಯ್ಕ, ನಗರಸಭೆ ಅಧ್ಯಕ್ಷರು ಶರ್ಮಿಳಾ ಮಾದನಗೇರಿ, ನಾಗರಾಜ ನಾಯ್ಕ, ಮಹಾಂತೇಶ್ ಹಾದಿಮನಿ, ಗುರುಪ್ರಸಾದ್ ಹೆಗಡೆ, ರಮಾಕಾಂತ ಭಟ್, ರಾಘವೇಂದ್ರ ಶೆಟ್ಟಿ, ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರು, ನಗರಸಭೆ ಸದಸ್ಯರುಗಳು, ಬೂತ್ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
