ಸುದ್ದಿ ಕನ್ನಡ ವಾರ್ತೆ
ಶಿರಸಿ: ನಾವೆಲ್ಲ ಒಪ್ಪಿಕೊಂಡ ರಾಷ್ಟ್ರಗೀತೆ ಜನಮನಗಣ ವಿವಾದ ಯಾರೂ ಮಾಡಬಾರದು. ನನ್ನನ್ನೂ ಸೇರಿ ಯಾರೂ ವಿವಾದ ಮಾಡಬಾರದು. ಆದರೆ, ಚರ್ಚೆ ಆಗಬೇಕಾದ್ದು, ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗುತ್ತಿದ್ದ ವಂದೇ ಮಾತರಂ ಗೀತೆ ಯಾಕೆ ಹಾಡುವದನ್ನು ನಿಲ್ಲಿಸಲಾಗಿದೆ ಎಂಬುದಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ‌ ಕಾಗೇರಿ ಪ್ರತಿಪಾದಿಸಿದರು.

ಅವರು ಉತ್ತರ ಕನ್ನಡದ ಶಿರಸಿಯ ದೀನದಯಾಳ ಭವನದಲ್ಲಿ ಜಿಲ್ಲಾ ಬಿಜೆಪಿ ಹಮ್ಮಿಕೊಂಡ ವಂದೇ ಮಾತರಂ ಗೀತೆಯ ೧೫೦ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರ ಭಕ್ತಿಗೆ ಮಂತ್ರ ಕೊಟ್ಟ ದಿನ ಈ ದಿನ. ೧೮೭೫ರಲ್ಲಿ ಬಂಕಿಂಚಂದ್ರ ಚಟರ್ಜಿ ಅವರು ಈ ದಿನ ಹಾಡಲ್ಪಟ್ಟ ದಿನ. ರಾಷ್ಟ್ರ ಜಾಗೃತಿಗೆ ಪ್ರೇರಣೆಯ ಗೀತೆ. ವಂದೇ ಮಾತರಂ ಗೀತೆ‌ ಮುಂದೆಯೂ ಪ್ರಸ್ತುತವಾಗಲಿದೆ ಎಂದರು.
ಅಂದಿನಿಂದ ಇಂದಿನ‌ ತನಕವೂ ವಂದೇ ಮಾತರಂ ಪ್ರಸ್ತುತವಾಗಿದೆ‌. ಈಗಷ್ಟೇ ಅಲ್ಲ, ರಾಷ್ಟ್ರದ ಏಕತೆ, ಅಖಂಡತೆಗೆ ಈ ಗೀತೆ‌ ಮುಂದೆಯೂ ಪ್ರಸ್ತುತವಾಗಲಿದೆ ಎಂದೂ ಹೇಳಿದ ಅವರು, ಕಾಂಗ್ರೆಸ್ ಮತ ರಾಜಕಾರಣದಿಂದ‌, ಮುಸ್ಲಿಂ ಓಲೈಕೆ ಕಾರಣದಿಂದ ೧೯೩೭ರಲ್ಲಿ ಅಧಿವೇಶನದಲ್ಲಿ ನಿಲ್ಲಿಸಿದೆ ಎಂದು ಆರೋಪಿಸಿದರು.

ವಂದೇ‌ ಮಾತರಂ ಗೀತೆ ಸರದಾರ ವಲ್ಲವಬಾಯಿ ಪಟೇಲರಿಗೂ ಪ್ರೇರಣೆ ನೀಡಿದೆ. ಈ ಗೀತೆ ಹಾಡಿನ ರೂಪದಲ್ಲಿ ಇರದೇ ಭಾವನಾತ್ಮಕವಾಗಿ ಕೂಡ‌ ಪ್ರೇರಣೆ ನೀಡಿದೆ. ರವೀಂದ್ರನಾಥ ಠಾಗೋರ್ ಅವರು ೧೮೯೬ರಲ್ಲಿ ಹೇಳಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಜಾಗೃತಿ ಭಾಗವಾಗಿತ್ತು. ಮತ್ತೆ ವಂದೇ ಮಾತರಂ ಗೀತೆ ಪ್ರಸ್ತುತಗೊಳಿಸಬೇಕು. ಎಲ್ಲರನ್ನೂ ಒಂದಾಗಿಸುವ ಗೀತೆ ಅಗತ್ಯವಾಗಿದೆ ಎಂದರು.

ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್.ಹೆಗಡೆ, ಮಂಡಲ ಅಧ್ಯಕ್ಷರಾದ ರಮೇಶ ನಾಯಕ, ಉಷಾ ಹೆಗಡೆ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಇತರರು ಇದ್ದರು.