ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಶೇವಾಳಿ ಗ್ರಾಮದ ಕೊಂಬೆಮೂಲೆಯ ವಿಭಾಕರ ಗಣೇಶ ದೇಸಾಯಿಯವರ ಮನೆಯಲ್ಲಿ ದಿನಾಂಕ:30-10-2025 ರ ಗುರುವಾರ ಭಗವದ್ಗೀತೆ ಸಪ್ತಾಹಕ್ಕೆ ವಿಭಾಕರ ದೇಸಾಯಿಯವರು ದೀಪ ಪ್ರಜ್ವಲನ ಮಾಡುವ ಮೂಲಕ ಚಾಲನೆ ನೀಡಿದ ಭಗವದ್ಗೀತಾ ಸಪ್ತಾಹ ಯಶಸ್ವಿಯಾಗಿ ಬುಧವಾರ ಸಂಪನ್ನ ಗೊಂಡಿತು.
ಶ್ರೀಭಗವದ್ಗೀತಾ ಅಭಿಯಾನ- ಕರ್ನಾಟಕ,ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ,ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ(ರಿ) ಶಿರಸಿ(ಉ.ಕ)ಇವರ ಮಾರ್ಗದರ್ಶನದಲ್ಲಿ ಭಗವದ್ಗೀತೆಯ 11ನೇಯ ಅಧ್ಯಾಯದ ಪಠಣದ ಜೊತೆಗೆ ಸಪ್ತಾಹದಲ್ಲಿ ನೂರು ಶ್ಲೋಕ ಪಠಣ ನಡೆಯಿತು.ಸುಮಂಗಲಾ ದೇಸಾಯಿ,ಸಂಧ್ಯಾ ದೇಸಾಯಿ, ತಿಮ್ಮಪ್ಪ ದೇಸಾಯಿ,ಶ್ರೀಪಾದ ದೇಸಾಯಿ,ಭಾಗೀರಥಿ ದೇಸಾಯಿ, ವನಿತಾ ದೇಸಾಯಿ,ಕಮಲಾಕ್ಷಿ ದೇಸಾಯಿ,ರಶ್ಮಿ ದೇಸಾಯಿ, ಸರೋಜಾ ದೇಸಾಯಿ,ಸಂಜೀವಿನಿ ದೇಸಾಯಿ,ಶಿಲ್ಪಾ ದೇಸಾಯಿ, ಪಾರ್ವತಿ ದೇಸಾಯಿ ಉಪಸ್ಥಿತರಿದ್ದರು.ಭಗವದ್ಗೀತೆ ಸಪ್ತಾಹದಲ್ಲಿ ಪಾಲ್ಗೊಂಡ ಎಲ್ಲರಿಗೂ ವಿಭಾಕರ ಗಣೇಶ ದೇಸಾಯಿ ಕುಟುಂಬದ ವರು ಧನ್ಯವಾದಗಳನ್ನು ಸಲ್ಲಿಸಿದರು.
