ಸುದ್ದಿ ಕನ್ನಡ ವಾರ್ತೆ

. ಯಲ್ಲಾಪುರ:ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಟ್ಟಿಗೆ ಗ್ರಾಮದ ಶ್ರೀ ಗಣೇಶ ರಾಮಾ ಕುಣಬಿ (ಇಡ್ಕೇಮನೆ)ಇವರ ಆಶ್ರಯದಲ್ಲಿ ಹಾಗೂ ಸಮಸ್ತ ಕುಟುಂಬದ ಪರವಾಗಿ ಎಮ್.ಕೆ. ಬಾಯ್ಸ್ (ಕಟ್ಚಿಗೆ) ಇವರ ವತಿಯಿಂದ ಕಾರ್ತಿಕೋತ್ಸವದ ಅಂಗವಾಗಿ ದಿನಾಂಕ: 08-11-2025 ರ ಶನಿವಾರ 7.00 ಗಂಟೆಗೆ ಇಡ್ಕೇಮನೆ (ಗಣೇಶ ರಾಮಾ ಕುಣಬಿ)ಯಲ್ಲಿ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಉದ್ಘಾಟನೆ, ಮುಖ್ಯ ಅತಿಥಿಗಳು, ಅತಿಥಿಗಳ ಮಾತು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ,ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮ, ಎಲ್ಲರಿಗೂ ರಾತ್ರಿ ಊಟದ ವ್ಯವಸ್ಥೆ ಇರುತ್ತದೆ. ಸಂಘಟಕರು ಸರ್ವರಿಗೂ ಆದರದ ಸ್ವಾಗತವನ್ನು ಕೋರುತ್ತಾ ಈ ಕಾರ್ಯಕ್ರಮಕ್ಕೆ ಬರಬೇಕೆಂದು ಮನಃಪೂರ್ವಕವಾಗಿ ವಿನಂತಿಸಿಕೊಂಡಿದ್ದಾರೆ.