ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಾರದೋತ್ಸವ ಕಾರ್ಯಕ್ರಮ ಯಶಸ್ವಿ ಸಂಪನ್ನಗೊಂಡಿತು.
ಪಾಲಕರು,ಪೋಷಕರು,ಶಿಕ್ಷಕರು ಮಕ್ಕಳು ಸೇರಿ ಮಾಡಿದ ಅಲಂಕೃತ ಮಂಟಪದಲ್ಲಿ ವಿದ್ಯಾ ದೇವತೆಯಾದ ಸರಸ್ವತಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಕ್ತಿ,ಭಾವದಿಂದ ಪೂಜೆ ಆರತಿ,ಭಜನೆಯನ್ನು ಮಾಡಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ,ಪಾಲಕರಿಗೆ,ಪೋಷಕರಿಗೆ ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮಧ್ಯಾಹ್ನ ಅನ್ನಪ್ರಸಾದ ಸೇವೆಯನ್ನು ಊರಿನ ಗ್ರಾಮಸ್ಥರು ಮಾಡಿದ್ದರು. ಯುವತಿ,ಮಹಿಳೆಯರಿಂದ ಪುಗುಡಿ ನೃತ್ಯದ ಜೊತೆ ಹಾಡುಗಳು,ಮಕ್ಕಳು,ಯುವಕರು,ಪುರುಷರಿಂದ ಆರತಿ,ಭಜನಾ ಕಾರ್ಯಕ್ರಮಗಳು ನಡೆದವು.ಶ್ರೀ ದೇವಿಯ ಫಲಪಲಾವಳಿಗಳ ಸವಾಲ್ ನಡೆಯಿತು. ಶಾಲೆಯ ಮುಖ್ಯ ಶಿಕ್ಷಕರಾದ ಬೀರಪ್ಪ ಉರ್ಮಿ ಅವರ ಮಾರ್ಗದರ್ಶನ, ಅತಿಥಿ ಶಿಕ್ಷಕರಾದ ರತ್ನಾಕರ ತೆಲೋಲಿಕರರವರ ಸಹಕಾರದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ಪಾಲಕರು,ಪೋಷಕರು ಶಾಲೆಯ ಹಳೆ ವಿದ್ಯಾರ್ಥಿಗಳು, ಊರಿನ ಹಿರಿಯರು, ಮಾತೆಯರು, ಗಣ್ಯರು,ಶಿಕ್ಷಣ ಪ್ರೇಮಿಗಳು,ಸಹ ಶಿಕ್ಷಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ಒಟ್ಟಿನಲ್ಲಿ ಅವುರ್ಲಿ ಗ್ರಾಮದ ಶಾಲಾ ಪರಿಸರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್,ಫಣಸೋಲಿ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ರವಿಕಿರಣ ಸಂಪಗಾವಿ,ಉಪವಲಯ ಅರಣ್ಯಅಧಿಕಾರಿಗಳಾದ ಶಾಂತಾರಾಮ,ವನಪಾಲಕ ರೇವಣ ಸಿದ್ದ,ಪರಿಸರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶ್ರೀದೇವಿಯ ದರ್ಶನ ಭಾಗ್ಯ ಪಡೆದು ಪುನೀತರಾದರು.
