ಸುದ್ದಿ ಕನ್ನಡ ವಾರ್ತೆ

. ದಾಂಡೇಲಿ: ಹಾಸನದಲ್ಲಿ ರವಿವಾರ ನಡೆದ ಮಾಣಿಕ್ಯ ಪ್ರಕಾಶನದ ದಶಮಾನೋತ್ಸವ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.

ಅಂತರ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಾಂಡೇಲಿ ಘಟಕದ ಉಪಾಧ್ಯಕ್ಷರಾದ ವೆಂಕಮ್ಮ ಗಾಂವಕರರವರಿಗೆ ಮಾಣಿಕ್ಯ ಪ್ರಕಾಶನದ ವತಿಯಿಂದ ಪ್ರತಿಭಾ ಕಾವ್ಯ ಮಾಣಿಕ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

 

ಈ ಸಂದರ್ಭದಲ್ಲಿ ಪ್ರಕಾಶಕಿ ದೀಪಾ ಉಪ್ಪಾರ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಕೊಟ್ರೇಶ ಎಸ್ ಉಪ್ಪಾರ, ಸಾಹಿತಿಗಳಾದ ವಾಸು ಸಮುದ್ರವಳ್ಳಿ , ಹೆಚ್ ಎಸ್ ಬಸವರಾಜ,ನಾಗರಾಜ ದೊಡ್ಡಮನಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು