Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂದಿಗದ್ದೆಯಲ್ಲಿ ಸಡಗರ ಸಂಭ್ರಮದಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

Banner Ad

ಶಿಕ್ಷಕರು,ಪಾಲಕರು,ವಿದ್ಯಾರ್ಥಿಗಳು ನಾಡ ದೇವಿಯಾದ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಭುವನೇಶ್ವರ ಮೇಸ್ತಾ ಕನ್ನಡ ನಾಡಿನ ಭಾಷೆ, ನೆಲ, ಜಲ, ಕನ್ನಡ ಸಾಹಿತ್ಯ,ಸಂಸ್ಕೃತಿಯ ವಿಷಯದ ಕುರಿತು ಮಾತನಾಡಿದರು.ಅತಿಥಿ ಶಿಕ್ಷಕಿಯರಾದ ಎಲ್ವಿಸ್,ಬೆಲ್ವಿಟಾ ಆರ್, ಸುವರ್ಣಾ ದೇಸಾಯಿ, ಭುವನೇಶ್ವರ ಮೇಸ್ತಾ ಸ್ವಾಗತಿಸಿ, ನಿರೂಪಿಸಿ,ವಂದಿಸಿದರು.

ಶಾಲೆಯ ವಿದ್ಯಾರ್ಥಿಗಳು ಕನ್ನಡದ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಮಂಗಲಾ ಉಪಾಧ್ಯ,ಸದಸ್ಯರು,ಪಾಲಕರು,ಪೋಷಕರು,ಅಂಗನವಾಡಿ ಕಾರ್ಯಕರ್ತೆ,ಆಶಾ ಕಾರ್ಯಕರ್ತೆ,ಮಕ್ಕಳು ಇದ್ದರು.

Banner Ad