ಸುದ್ಧಿಕನ್ನಡ ವಾರ್ತೆ

Goa: ಗೋವಾದಲ್ಲಿ ನೀರಿನ ಅಗತ್ಯತೆಯನ್ನು ಪೂರ್ಣಗೊಳಿಸಲು ತಿಳಾರಿ ಅಣೇಕಟ್ಟಿನ ಎತ್ತರವನ್ನು ಹೆಚ್ಚಳ ಮಾಡಬೇಕು, ಇದರಿಂದಾಗಿ ಅಣೇಕಟ್ಟಿನಲ್ಲಿ ಹೆಚ್ಚು ನೀರು ಸಂಘ್ರಹಿಸಲು ಸಾಧ್ಯವಾಗಲಿದೆ ಎಂದು ಗೋವಾ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದೆ. ಈ ವಿಷಯವನ್ನು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸುವುದಾಗಿ ಮಾಹಿತಿ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗೋವಾ ರಾಜ್ಯ ಜಲ ಸಂಪನ್ಮೂಲ ಇಲಾಖೆ ಮುಖ್ಯ ಎಂಜಿನೀಯರ್ ಪ್ರಮೋದ ಬಾದಾಮಿ ಮಾಹಿತಿ ನೀಡಿ- ತಿಳಾರಿ ಅಣೇಕಟ್ಟು ಯೋಜನೆಗೆ ಸಂಬಂಧಿಸಿದಂತೆ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರದೊಂದಿಗೆ ಕರಾರು ಮಾಡಿಕೊಳ್ಳಲಾಗಿದೆ. ಇದರ ಅನುಸಾರ ತಿಳಾರಿ ಅಣೇಕಟ್ಟಿನ ಶೇ 80 ರಷ್ಟು ನೀರಿಗೆ ಗೋವಾದ ಅಧಿಕಾರವಿದೆ. ಇದರಿಂದಾಗಿ ಮಹಾರಾಷ್ಟ್ರ ಸರ್ಕಾರವು ತಿಳಾರಿ ನೀರನ್ನು ಕರ್ನಾಟಕಕ್ಕೆ ತಿರುಗಿಸಲು ಸಾಧ್ಯವಿಲ್ಲ ಎಂದರು.

ಔದ್ಯೋಗಿಕ ಕಾರಣಕ್ಕಾಗಿ ತಿಳಾರಿ ಅಣೇಕಟ್ಟಿನ ಎತ್ತರವನ್ನು ಹೆಚ್ಚಳ ಮಾಡುವ ಅಗತ್ಯವಿದೆ. ಇದರಿಂದಾಗಿ ಕರ್ನಾಟಕಕ್ಕೆ ತಿಳಾರಿ ನೀರನ್ನು ತಿರುಗಿಸುವ ಪ್ರಶ್ನೆಯೇ ಉಧ್ಭವಿಸುವುದಿಲ್ಲ. ಕರ್ನಾಟಕ ಸರ್ಕಾರವು ಮಹಾರಾಷ್ಟ್ರ ಸರ್ಕಾರದ ಬಳಿ ತಿಳಾರಿ ನೀರು ಪಡೆಯುವ ಕುರಿತಂತೆ ಅಥವಾ ನೀರಿನ ಅಗತ್ಯತೆಯ ಕುರಿತಂತೆ ಇದುವರೆಗೂ ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ ಎಂಬ ಅಧೀಕೃತ ಮಾಹಿತಿ ಗೋವಾ ಸರ್ಕಾರಕ್ಕೆ ಲಭಿಸಿದೆ ಎನ್ನಲಾಗಿದೆ. ಕರ್ನಾಟಕವು ತಿಳಾರಿ ನೀರನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂಬ ವಿಷಯ ಗೋವಾ ಸರ್ಕಾರಕ್ಕೆ ಮಾಧ್ಯಗಳ ಮೂಲಕ ಲಭಿಸಿದೆ ಎನ್ನಲಾಗಿದೆ.
ತಿಳಾರಿ ಅಣೇಕಟ್ಟು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಜಂಟಿ ಯೋಜನೆಯಾಗಿದೆ. ಈ ಯೋಜನೆಗಾಗಿ ಗೋವಾ ಸರ್ಕಾರವು ಮಾಹಾಮಂಡಳವನ್ನೂ ಸ್ಥಾಪಿಸಿದೆ. ತಿಳಾರಿ ಅಣೇಕಟ್ಟಿನ ಎತ್ತರವನ್ನು ಹೆಚ್ಚಿಸಲು 330 ಕೋಟಿ ರೂ ಖರ್ಚಾಗಲಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ವಿಷಯವನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಮಹಾಮಂಡಳದಲ್ಲಿಯೂ ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.