Banner Ad

ಸುದ್ದಿ ಕನ್ನಡ ವಾರ್ತೆ

ಕಾರವಾರ:ತಾಲೂಕಿನ ಜಿಲ್ಲೆಯ ಪ್ರಸಿದ್ಧ ಜಾತ್ರೆಯಲ್ಲಿ ಒಂದಾದ ಕದ್ರಾದ ಶ್ರೀ ಮಹಾಮಾಯಾ ಜಾತ್ರಾ ಮಹೋತ್ಸವ ರವಿವಾರ ವಿಜ್ರಂಭಣೆಯಿಂದ ನಡೆಯಿತು. ಪಾಂಡವ ಪಂಚಮಿಯ ಭಾನುವಾರ ಶ್ರೀ ಮಹಾಮಾಯಾ ದೇವಿಯು ಇಲ್ಲಿನ ಶಿಂಗೇವಾಡಿಯ ದೇವಾಲಯದಿಂದ ಮೆರವಣಿಗೆಯಲ್ಲಿ ಹೊರಟು ಕದ್ರಾಗೆ ಆಗಮಿಸಿ ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನಳಾಗಿ ದರ್ಶನ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀದೇವಿಯ ಆಶೀರ್ವಾದಕ್ಕೆ ಪಾತ್ರರಾದರು.

Banner Ad

ತಾಲೂಕಿನ ಪ್ರಥಮ ಜಾತ್ರೆಯಾಗಿರುವ ಕದ್ರಾದ ಮಹಾಮಾಯಾ ಜಾತ್ರೆಗೆ ಬಿಟ್ಟು ಬಿಡದೇ ಸುರಿದ ಮಳೆಯ ನಡುವೆಯೂ ತಾಲೂಕಿನ,ಜಿಲ್ಲೆಯ ಮಾತ್ರವಲ್ಲದೇ ನೆರೆಯ ರಾಜ್ಯಗಳಾದ ಗೋವಾ,ಮಹಾರಾಷ್ಟ್ರಗಳಿಂದ ಭಕ್ತರು ಆಗಮಿಸಿ ಶ್ರೀದೇವಿಯ ದರ್ಶನ ಭಾಗ್ಯ ಪಡೆದರು. ಭಾನುವಾರ ಬೆಳಿಗ್ಗೆಯಿಂದಲೇ ಭಕ್ತರು ಶ್ರೀದೇವಿಯ ದರ್ಶನಕ್ಕೆ ಸರದಿಯ ಸಾಲಿನಲ್ಲಿ ನಿಂತು ತಡರಾತ್ರಿಯವರೆಗೂ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಭಕ್ತರು ತಮ್ಮ ಹರಕೆಗಳನ್ನು ಸಲ್ಲಿಸಿದರು.

ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು. ಜಾತ್ರೆಯಲ್ಲಿ ಪೂಜಾ ಸಾಮಗ್ರಿಗಳ,ಹೂವು, ಹಣ್ಣಿನ ಅಂಗಡಿ,ಮಕ್ಕಳ ಆಟಿಕೆಯ ಸಾಮಗ್ರಿಯ,ಬಟ್ಟೆಯ,ಮಿಠಾಯಿ,ಸಿಹಿ ತಿಂಡಿತಿನಿಸಿನ ಅಂಗಡಿಗಳಲ್ಲಿ ಭರ್ಜರಿಯ ವ್ಯಾಪಾರ ನಡೆಯಿತು.ಪ್ರತಿವರ್ಷದಂತೆ ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯವರು,ಊರಿನ ಗ್ರಾಮಸ್ಥರು,ವಿವಿಧ ಇಲಾಖೆಯವರು,ಆರಕ್ಷಕ ಇಲಾಖೆಯವರು ಜಾತ್ರೆಯ ಯಶಸ್ಸಿಗೆ ಸಹಕರಿಸಿದರು.

Banner Ad