ಸುದ್ಧಿಕನ್ನಡ ವಾರ್ತೆ
ಜೋಯಿಡಾ: ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ತಾಲೂಕಿನ ಗಣೇಶಗುಡಿ ಅಕ್ಕ ಪಕ್ಕ ದಲ್ಲಿ ನಡೆಯುತ್ತಿರುವ ಮೋಜು ಮಸ್ತಿ ಪ್ರವಾಸೋದ್ಯಮವನ್ನು ನಾವು ಖಂಡಿಸುತ್ತೇವೆ, ಎಂದು ನಂದಿಗದ್ದಾ ಗ್ರಾಮ ಪಂಚಾಯತ್ ಅಧ್ಯಕ್ಷ ಅರುಣ ದೇಸಾಯಿ ಹೇಳಿದರು.
ಅವರು ಜೋಯಿಡಾ ದ ಪುಣ್ಯ ಕ್ಷೆತ್ರ ಉಳವಿಯಲ್ಲಿ ನಡೆದ 71ನೇ ವನ್ಯ ಜೀವಿ ಸಪ್ತಾಹದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅಥಿತಿ ಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು ಪರಿಸರದ ಹೆಸರಿನಲ್ಲಿ ಪ್ರವಾಸೋದ್ಯಮ ನಡೆಯಲಿ ಆದರೆ ತಾಲೂಕಿನ ಹಲವಾರು ಕಡೆ, ಪ್ರವಾಸೋದ್ಯಮದ ಹೆಸರಿನಲ್ಲಿ ಮೋಜು ಮಸ್ತಿ. ಅತಿಯಾಗಿದೆ, ಇದು ಸರಿಯಲ್ಲ, ಇಂತವುಗಳಿಗೆ ಅರಣ್ಯ ಇಲಾಖೆ ಕಡಿವಾಣ ಹಾಕುವ ಮೂಲಕ ಸ್ಥಳೀಯ ಜನರ ಸಹಬಾಗಿತ್ವದ, ಅಭಿವೃದ್ಧಿಗೆ ಪೂರಕವಾದ ಪ್ರವಾಸೋದ್ಯಮ ನಡೆಯಬೇಕು ಎಂದರು.
ಉಳವಿಯ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೊಕಾಶಿ ಮಾತನಾಡಿ ಅರಣ್ಯ ಇಲಾಖೆ ಜನರ ಕಷ್ಟ ಗಳಿಗೆ ದ್ವನಿ ಯಾಗ ಬೇಕು ಜನರ ಮೂಲಭೂತ ಹಕ್ಕನ್ನು ಯಾವುದೇ ಕಾರಣಕ್ಕೂ ಕಸಿಯಲು ಸಾಧ್ಯವಿಲ್ಲ ಜನರೇ ಅರಣ್ಯ ವನ್ನು ರಕ್ಸಿಸಿದ್ದಾರೆ, ಅವರ ಬದುಕಿಗೆ ಏನೇ ತೊಂದರೆ ಆದರೂ ನಾವು ಸಹಿಸುವುದಿಲ್ಲ, ಅವರ ಅಗತ್ಯತೆ ಗಳಾದ ರಸ್ತೆ ಸೇತುವೆ ಕುಡಿಯುವ ನೀರಿನ ಯೋಜನೆ ಮನೆ ಕಟ್ಟಲು, ಇಲಾಖೆಯಿಂದ ತೊಂದರೆ ಆದರೆ ನಾವು ಜನರೊಂದಿಗೆ ನಿಲ್ಲುತ್ತೆವೆ, ಇದನ್ನು ಇಲಾಖೆ ಗಮನಿಸಲಿ ಎಂದರು. ಉಳವಿ ದೇವಸ್ಥಾನದ ಪ್ರಮುಖ ಅರ್ಚಕ ಶಂಕ್ರಯ್ಯ ಶಾಸ್ತ್ರೀ ಯವರು ಮಾತನಾಡಿ ಇಲ್ಲಿ ಪರಿಸರ ದೊಂದಿಗೆ ಬದುಕಿ ಬಂದು ಇಲ್ಲಿಯೇ ವಾಸವಾಗಿರುವ ಜನರ ಮೂಲ ಭೂತ ಸಮಸ್ಯೆ ಪರಿಹಾರಕ್ಕೆ ಇಲಾಖೆ ಸಹಕರಿಸುವ ಮೂಲಕ ಸಹಬಾಗಿತ್ವದ ಪರಿಸರ ಉಳಿಸಬೇಕು, ಜನರು ಬದುಕಲು ಬೇಕಾದ ಸಹಕಾರ ನೀಡಬೇಕು ಎಂದರು.
ಒಂದು ವಾರಗಳ ಕಾಲ ನಡೆದ ವಿವಿಧ ಸ್ಪರ್ಧೆ ಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.ಇದಕ್ಕೂ ಮೊದಲು ಉಳವಿಯ ಪ್ರಮುಖ ಬೀದಿಯಲ್ಲಿ ಪರಿಸರ ಜಾತಾ ನಡೆಸಲಾಯಿತು, ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ ಎಸ್ ಕಳ್ಳಿ ಮಠ, ಗುಂದ, ಅಣಶಿ ಕ್ಯಾಸ್ಟ್ಲರಾಕ್ ಪಣಸೋಲಿ ವಲಯ ಅರಣ್ಯಅಧಿಕಾರಿ ಗಳು ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಗುಂದ ವಲಯ ಅರಣ್ಯಆಧಿಕಾರಿ ನೀಲಕಂಠದೇಸಾಯಿ ಉತ್ತಮ ಸಂಘಟನೆ ಮಾಡಿದ್ದರು.