ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಉಪಳೇಶ್ವರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಭ್ದಿಯ ಸಂದರ್ಭದಲ್ಲಿ ವಿಜಯದಶಮಿ ಉತ್ಸವ ಯಶಸ್ವಿ ಸಂಪನ್ನಗೊಂಡಿತು.
ನೂರಾರು ಸಂಖ್ಯೆಯಲ್ಲಿದ್ದ ಬಾಲಕ ಮತ್ತು ತರುಣ ಸ್ವಯಂಸೇವಕರಿಂದ ಉಪಳೇಶ್ವರದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕಾ ಸೇವಾ ಸಹ ಪ್ರಮುಖ ರಾಘವೇಂದ್ರ ಗುರ್ಕಮನೆ ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತದಲ್ಲಿ ಎಲ್ಲೂ ಕವಲುಗಳಾಗದೇ ನೂರು ವರ್ಷ ಗಳನ್ನು ಪೂರೈಸಿದೆ.ಈ ರೀತಿಯಲ್ಲಿ ಜಗತ್ತಿನಲ್ಲಿ ನಡೆದು ಬಂದ ಸಂಘ ಮತ್ತೊಂದಿಲ್ಲ,ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಭ್ದಿಯ ಸಂದರ್ಭದಲ್ಲಿ ಉಪಳೇಶ್ವರ ಮಂಡಲದ ವಿಜಯದಶಮಿ ಉತ್ಸವದಲ್ಲಿ ವಿಶೇಷ ಬೌದ್ಧಿಕ ನೀಡಿದರು. ಹಿರಿಯರಾದ ಸೀತಾರಾಮ ಗಣೇಶ ಹೆಗಡೆ ಬೇಣಬಾಳಗದ್ದೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ಪ್ರಮೋದ ಹೆಗಡೆ ವೈಯುಕ್ತಿಕ ಗೀತೆ ಹಾಡಿದರು, ಸುಬ್ರಾಯ ದಾನ್ಯಾನಕೊಪ್ಪ ಸ್ವಾಗತಿಸಿದರು, ಗೋಪಾಲಕೃಷ್ಣ ಬಾಳೆಗದ್ದೆ ವಂದಿಸಿದರು.