ಸುದ್ದಿ ಕನ್ನಡ ವಾರ್ತೆ

ಅಂಕೋಲಾ:ತಾಲೂಕಿನ ಡೊಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಗ್ಗಾರಿನ ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಶತಮಾನೋತ್ಸವ ಸಂದರ್ಭದಲ್ಲಿ ದಾಂಡೇಲಿ ಜಿಲ್ಲೆ ಯಲ್ಲಾಪುರ ತಾಲೂಕಿನ ಹಳವಳ್ಳಿ ಮಂಡಲದ ವಿಜಯದಶಮಿ ಉತ್ಸವ ನಡೆಯಿತು.

ಕಾರ್ಯಕ್ರಮದಲ್ಲಿ ಸ್ವಯಂಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಶಾಂತ ಹೆಗ್ಗಾರ ಸ್ವಾಗತ,ಶೇಖರ ಗಾಂವ್ಕರ ನಿರೂಪಣೆ,ಕಾರ್ತಿಕ ಭಟ್ಟ ಅಮ್ರತ ವಚನ ಓದಿದರು,ಗಣೇಶ ಭಟ್ಟ ವೈಯುಕ್ತಿಕ ಗೀತೆ ಹಾಡಿದರು, ನರಹರಿ ಮರಾಠೆ ಮುಖ್ಯ ಅತಿಥಿಗಳಾಗಿ,ಗಣಪತಿ ಹೀರೆಸರ ವಕ್ತಾರರಾಗಿ ಬೌದ್ಧಿಕ ನಡೆಸಿಕೊಟ್ಟರು.ವೆಂಕಟೇಶ ಗೇರಗದ್ದೆ ಹಾಗೂ ವಿನಾಯಕ ಬೆಳ್ಳಿ ಪ್ರಾರ್ಥನೆ,ಮುಖ್ಯ ಶಿಕ್ಷಕರಾಗಿ ಮಹಾಬಲೇಶ್ವರ ಭಟ್ಟ ಶೇವ್ಕಾರ ನಿರ್ವಹಿಸಿದರು.ರಮಾನಂದ ಶೇವ್ಕಾರ ವಂದಿಸಿದರು.