ಸುದ್ಧಿಕನ್ನಡ ವಾರ್ತೆ
Goa(ಬಿಚೋಲಿ): ಕಳೆದ ಕೆಲ ದಿನಗಳಿಂದ ಗೋವಾ ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಹೆಚ್ಚುತ್ತಿರುವಂತೆಯೇ ಮಾದಕ ವಸ್ತುಗಳ ಕಳ್ಳ ಸಾಗಾಟ ಕೂಡ ಹೆಚ್ಚಳವಾಗುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಗೋವಾ ಪೋಲಿಸರು ಅಪರಾಧಗಳ ನಿಗ್ರಹಕ್ಕೆ ಸತತ ಕಾರ್ಯಾಚರಣೆ ನಡೆಸುತ್ತಿದ್ದರೂ ಕೂಡ ಇಂತಹ ಪ್ರಕರಣ ಮತ್ತೆ ಮತ್ತೆ Pಮರುಗಳಿಸುತ್ತಿರುವುದು ಭೇದಕರ ಸಂಗತಿಯೇ ಆಗಿದೆ. ಗೋವಾದಲ್ಲಿ ಹಲವು ಅಪರಾಧ ಪ್ರಕರಣದಲ್ಲಿ ಕರ್ನಾಟಕ ಮೂಲದ ವ್ಯಕ್ತಿಗಳು ಸಿಲುಕಿಕೊಂಡಿರುವುದು ಇನ್ನೊಂದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ. ಮಾದಕ ದೃವ್ಯ ಅಪರಾಧ ಪ್ರಕರಣದಲ್ಲಿ ಕರ್ನಾಟಕ ಮೂಲದ ವ್ಯಕ್ತಿ ಬಂಧನಕ್ಕೊಳಗಾಗಿದ್ದಾನೆ.
ಮಾದಕ ದ್ರವ್ಯ ನಿಗ್ರಹ ಕಾರ್ಯಾಚರಣೆಯ ಅಂಗವಾಗಿ ಗೋವಾದ ಬಿಚೋಲಿ ಪೊಲೀಸರು ಐಡಿಸಿ ಪ್ರದೇಶದಲ್ಲಿ ವಾಸವಾಗಿರುವ ಕರ್ನಾಟಕ ಮೂಲದ ಶಾಹಿರ್ ರಾಜಾಸಾಹೇಬ ಶೈನವರ್ (35) ಎಂಬಾತನನ್ನು ಬಂಧಿಸಿ ಶಂಕಿತ ದ್ವಿಚಕ್ರ ವಾಹನದೊಂದಿಗೆ 90 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸಿಟಿ ಬೈಪಾಸ್ ಜಂಕ್ಷನ್‍ನಲ್ಲಿ ಬಿಚೋಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಇದರ ಅಡಿಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಪೊಲೀಸರು ಈತನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಿ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್, ಉಪಧೀಕ್ಷಕ ಸಾಗರ್ ಏಕೋಸ್ಕರ್ ಮತ್ತು ಇನ್ಸ್‍ಪೆಕ್ಟರ್ ದಿನೇಶ್ ಗಡೇಕರ್ ಅವರ ಮಾರ್ಗದರ್ಶನದಲ್ಲಿ ಪೋಲಿಸ್ ಉಪ ನಿರೀಕ್ಷಕ ವಿಕೇಶ್ ಹಡ್ಫಡ್ಕರ್, ಆಕಾಶ ಶಿಂಧೆ, ನಿಲೇಶ್ ಫೋಗೇರಿ, ಜಯೇಶ್ ಖಂಡೇಪಾರ್ಕರ್, ಅನಿಕೇತ್ ಪರಬ್ ಮಯೂರ್ ಅಸೋಲ್ಕರ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಂಧಿತ ಆರೋಪಿಯ ವಿರುದ್ಧ ಪೋಲಿಸರು ಹೆಚ್ಚಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.