ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಮೂಲಕ ಸಾಮಾಜಿಕ ಕಾರ್ಯಕರ್ತ ಗೌರವ್ ಬಕ್ಷಿ ಮಾನಹಾನಿ ಮಾಡಿದ್ದರು. ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‍ನ ಗೋವಾ ಪೀಠಕ್ಕೆ ಕ್ಷಮೆಯಾಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಗೌರವ್ ಬಕ್ಷಿಗೆ 50,000 ರೂ. ದಂಡ ವಿಧಿಸಿ, ಗೋವಾ ಪೆÇಲೀಸರ (Police) ಅಪರಾಧ ವಿಭಾಗವು ಅವರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಆದೇಶಿಸಿದೆ.

ರಾಜ್ಯದ ಭೂ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುವ ವೀಡಿಯೊವನ್ನು ಗೌರವ್ ಬಕ್ಷಿ ಮಾಡಿದ್ದರು ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದರು. ಈ ಘಟನೆಯ ನಂತರ ಗೋವಾ ಮುಖ್ಯಮಂತ್ರಿಯ ಸೂಚನೆಯ ಮೇರೆಗೆ, ಗೋವಾ ಪೆÇಲೀಸರ ಅಪರಾಧ ವಿಭಾಗವು ಜುಲೈ 2025 ರಲ್ಲಿ ಗೌರವ್ ಬಕ್ಷಿ ವಿರುದ್ಧ ಮಾನಹಾನಿ ಪ್ರಕರಣವನ್ನು ದಾಖಲಿಸಿತ್ತು.

 

ಗೋವಾ ಪೆÇಲೀಸರು ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಗೌರವ್ ಬಕ್ಷಿ ಬಾಂಬೆ ಹೈಕೋರ್ಟ್‍ನ ಗೋವಾ ಪೀಠಕ್ಕೆ ಮನವಿ ಮಾಡಿದ್ದರು. ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ, ಗೌರವ್ ಬಕ್ಷಿ ಅವರು ಮುಖ್ಯಮಂತ್ರಿಯ ಮಾನಹಾನಿ ಪ್ರಕರಣಕ್ಕೆ ಕ್ಷಮೆಯಾಚಿಸಿದರು. ವೀಡಿಯೊವನ್ನು ಅಳಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.