ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಹುಲಿ ಯೋಜನೆ ಪ್ರದೇಶದಲ್ಲಿನ ಅರಣ್ಯ ವಾಸಿಗಳ ಬದುಕು ಹಾಗೂ ಕಾಡು ಪ್ರಾಣಿಗಳಿಂದ ಜೀವ ಭದ್ರತೆ ಹಾಗೂ ವನ್ಯಜೀವಿ ಕಾನೂನಡಿಯಲ್ಲಿ ಬದುಕಿನ ಹಕ್ಕಿಗಾಗಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಾಲೂಕಿನ ವಿವಿಧ ಸಂಘಟನೆಗಳಿಂದ ಪಕ್ಷಾತೀತವಾಗಿ ಅಕ್ಟೋಬರ್ 8 ರಂದು ಕುಂಬಾರವಾಡಾ ಕಾರವಾರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಯಲಿದೆ.
ಬದುಕನ್ನೇ ಹರಣಮಾಡುತ್ತಿರುವ ಕರಡಿ ದಾಳಿ,ಕ್ರೂರ ಮೃಗಗಳ ದಾಳಿಯಿಂದ ರಕ್ಷಣೆ, ಪ್ರಾಣ ಕಳೆದುಕೊಂಡ ಕುಟುಂಬಕ್ಕೆ ರೂ 50 ಲಕ್ಷ ಪರಿಹಾರ,ಕಾಡಿನಲ್ಲಿನ ಕುಮ್ರಿ ,ಗೋಮಾಳ,ಕಂದಾಯ ಭೂಮಿಗಳನ್ನು ,ಸೊಪ್ಪಿನ ಬೆಟ್ಟ ಸೇರಿದಂತೆ ಪಾರಂಪರಿಕವಾಗಿದ್ದ ಹಕ್ಕನ್ನು ಬಿಟ್ಟು ಹುಲಿಯೋಜನೆ ಜಾರಿ ಮಾಡಿದ 2003 ರ ಕಾನೂನು ಜಾರಿಗೊಳಿಸುವುದು.ಅವೈಜ್ಞಾನಿಕ ಪ್ಯಾಕೇಜ್ ನೀಡಿ ಹುಲಿ ಯೋಜನೆ ಯಿಂದ ಹೊರ ಹಾಕಿದ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ, ಪ್ರವಾಸೋದ್ಯಮ, ಬೋಟಿಂಗ್ ಸೇರಿದಂತೆ ಟೈಗರ್ ಫೌಂಡೇಷನ್ ಹೆಸರಿನಲ್ಲಿ ಬಂದ ಹಣದ ದುರುಪಯೋಗ ಆದ ಬಗ್ಗೆ ತನಿಖೆಗೆ ಆಗ್ರಹ ಹೀಗೆ ಸುಮಾರು ಹದಿನೈದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಾಳಿ ಹುಲಿ ಯೋಜನೆ ಪ್ರದೇಶದ ವ್ಯಾಪ್ತಿಯ ಸಾವಿರಾರು ಕುಟುಂಬಗಳು ಹಾಗೂ ವಿವಿಧ ಸಂಘಟನೆಗಳ ಜೊತೆಗೂಡಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿವೆ.