ಸುದ್ಧಿಕನ್ನಡ ವಾರ್ತೆ
ಪಣಜಿ:ಗೋವಾ ರಾಜ್ಯ ಸರ್ಕಾರದ ಮಾಜೆ ಘರ್ ಯೋಜನೆ ಜನರಿಗೆ ಮಹತ್ವದ ಸಬಲೀಕರಣ ಉಪಕ್ರಮವಾಗಿದೆ, ಗೋವಾ ವಿಮೋಚನೆಯ ನಂತರ, ಮನೆಗಳನ್ನು ಕ್ರಮಬದ್ಧಗೊಳಿಸುವ ದೀರ್ಘಾವಧಿಯ ಬೇಡಿಕೆ ಇತ್ತು, ಈ ಯೋಜನೆಯು ಪೀಡಿತ ಕುಟುಂಬಗಳಿಗೆ ಅಗತ್ಯವಾದ ಪರಿಹಾರವನ್ನು ನೀಡುತ್ತದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ನುಡಿದರು.

ಗೋವಾದ ಬಾಂಬೋಲಿಂ ಬಳಿಯ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂ ನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಮಾಜೆ ಘರ್ ಯೋಜನೆಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರು ತುಳಸಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಪಣಜಿಯ ಜುಂತಾಹೌಸ್, ಸರ್ಕಾರಿ ಗ್ಯಾರೇಜ್, ಪ್ರಶಾಸ ಸ್ತಂಭ ಮತ್ತು ಹೊಸ ಸಕ್ರ್ಯೂಟ್ ಹೌಸ್‍ನ ಪುನರಾಭಿವೃದ್ಧಿ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿದರು.
ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ರಕ್ಷಣಾ ಮಂತ್ರಿ ದಿ. ಮನೋಹರ್ ಪರೀಕರ್ ರವರನ್ನು ಕೇಂದ್ರ ಮಂತ್ರಿ ಅಮಿತ್ ಶಾ ನೆನಪಿಸಿಕೊಂಡರು. ಮಾಜಿ ಘರ್ ಯೋಜನೆಯು ಗೋವಾದ ಜನರಿಗೆ ತಮ್ಮ ಸ್ವಂತ ಮನೆಯ ಅಧಿಕಾರ ನೀಡುತ್ತದೆ. ಕೇವಲ ಮೂರು ದಿನಗಳ ಒಳಗೆ ಅಕ್ರಮ ಮನೆಗಳನ್ನು ಸಕ್ರಮ ಗೊಳಿಸುವ ಯೋಜನೆ ಇದಾಗಿದೆ. 2014 ರ ಒಳಗೆ ನಿರ್ಮಿಸಿದ ಅಕ್ರಮ ಮನೆಗಳನ್ನು ಕೇವಲ ಹೆಸರಿಗೆ ಮಾತ್ರ ಶುಲ್ಕ ಪಡೆದು ಅಧೀಕ್ರಮ ಪತ್ರವನ್ನು ನೀಡುವ ಯೋಜನೆ ಇದಾಗಿದೆ. ಈ ಯೋಜನೆಯ ಅಡಿಯಲ್ಲಿ ಅಕ್ರಮ 300 ಮೀಟರ್ ವರೆಗೆ ಮನೆಯನ್ನು ಹೆಸರಿಗೆ ಅಧೀಕೃತ ಪತ್ರ ನೀಡುವ ಯೋಜನೆ ಇದಾಗಿದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ನುಡಿದರು.

ಅಕ್ರಮ ಮನೆಗಳನ್ನು ಸಕ್ರಮ ಗೊಳಿಸುವ ಮಾಜೆ ಘರ್ ಯೋಜನೆ ಮೂಲಕ ಗೋವಾದಲ್ಲಿ ಜನರಿಗೆ ಮನೆಯನ್ನು ಅಧೀಕೃತಗೊಳಿಸುತ್ತಿರುವ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನೇತೃತ್ವದ ಗೋವಾ ಸರ್ಕಾರಕ್ಕೆ ಅಮಿತ್ ಶಾ ಅಭಿನಂದನೆ ಸಲ್ಲಿಸಿದರು.

ಗೋವಾ ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆಯೇ ಕಾಂಗ್ರೇಸ್ ಠೀಕಾ ಪ್ರಹಾರ ನಡೆಸಿತು. ಖರ್ಗೆ ರವರೆ ಗೋವಾ ರಾಜ್ಯ ಸಣ್ಣವಾಗಿದ್ದರೂ ಕೂಡ ಅಷ್ಟೇ ಮಹತ್ವವಿದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಪ್ರತ್ಯುತ್ತರ ನೀಡಿದರು.

ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಕೇಂದ್ರ ಸಚಿವ ಶ್ರೀಪಾದ್ ನಾಯ್ಕ, ಸಚಿವ ವಿಶ್ವಜಿತ್ ರಾಣೆ, ದಿಗಂಬರ್ ಕಾಮತ್, ಮಾವಿನ್ ಗುದಿನ್ಹೊ, ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ದಾಮು ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಗೋವಾ ರಾಜ್ಯದ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ “ಮಾಜೆಘರ್” ಯೋಜನೆಯ ಮಾಹಿತಿ ನೀಡುವ ಪುಸ್ತಕ ಬಿಡುಗಡೆಗೊಳಿಸಲಾಯಿತು. ಅಕ್ರಮ ಮನೆಗಳ ಸಕ್ರಮಗೊಳಿಸಿರುವ 11 ಜನರಿಗೆ ಸನದ್ ವಿತರಣೆ ಮಾಡಲಾಯಿತು. 1972ರ ಪೂರ್ವದಲ್ಲಿರುವ ಮನೆ ಸಕ್ರಮಗೊಳಿಸಿರುವ ಪ್ರಮಾಣ ಪತ್ರ ಹಾಗೂ ಕೋಮುನಿದ ಜಮೀನಿನಲ್ಲಿರುವ ಮನೆಯನ್ನು ಸಕ್ರಮಗೊಳಿಸಲು ಇಬ್ಬರಿಗೆ ಅರ್ಜಿಯನ್ನು ಕೇಂದ್ರ ಮಂತ್ರಿ ಅಮಿತ್ ಶಾ ರವರು ವಿತರಣೆ ಮಾಡಿದರು.