ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಬಹುಸಂಖ್ಯಾತ ಬುಡಕಟ್ಟು ಕುಣಬಿ ಸಮಾಜದ ಬಾಂಧವರು ಘಟ ಸ್ಥಾಪನೆಯ ದಿನದಿಂದ ದಸರಾ ಹಬ್ಬದ ದಿನದವರೆಗೆ ಹತ್ತು ದಿನಗಳ ಕಾಲ ಜೋಯಿಡಾ,ರಾಮನಗರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮ ಪಂಚಾಯತದ ಬುಡಕಟ್ಟು ಜನಾಂಗದ ಕುಣಬಿ ಸಮಾಜದ ಬಾಂಧವರು ತಮ್ಮದೇ ಆದ ಹಿರಿಯರು ಹೇಳಿಕೊಟ್ಟ ಪದ್ಧತಿಯ ಸಂಸ್ಕೃತಿಯಲ್ಲಿ ಆಚರಿಸುತ್ತಾರೆ.
ನವರಾತ್ರಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮಧ್ಯಾಹ್ನದ ಭೋಜನದ ವೇಳೆ ತಮ್ಮ ಸಂಬಂಧಿ (ಸೈ ರೋ)ದಂಪತಿಗಳನ್ನು ನಿರಾಹಾರ (ಉಪವಾಸ)ಕರೆದು ಅವರಿಗೆ ಗೌರವದಿಂದ ಸತ್ಕಾರ ನೀಡಿ ವಿವಿಧ ರೀತಿಯ ಭಕ್ಷ ಭೋಜನ (ವಡೆ, ಸೌತೆಕಾಯಿ,ಕೇಸು ಎಲೆ,ಪಲ್ಯ,ಪಾಯಸ ಇತ್ಯಾದಿ)ಬಡಿಸುವುದು ಸಂಪ್ರದಾಯ. ಸಂಜೆಯ ವೇಳೆ ಹಿರಿಯರು, ಯುವಕರು,ಮಕ್ಕಳು ಸೇರಿ ತಮ್ಮಲ್ಲಿರುವ ಸಂಗೀತ ವಾದ್ಯಗಳಾದ ಡೋಲ್, ತಬಲಾ, ತಾಳ,ಹಾರ್ಮೋನಿಯಂ ಇತ್ಯಾದಿಗಳನ್ನು ಬಳಸಿ,ವೇಷ ಭೂಷಣ ಮಾಡಿ ಕೊಂಕಣಿ, ಮರಾಠಿ ಭಾಷೆಯಲ್ಲಿ ಸುರುತಾಚೆ ಹಾಡು, ಸೋಂಗಾ ನೃತ್ಯ,ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.ಹೀಗೆ ಹತ್ತು ದಿನಗಳ ಕಾಲ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.