ಸುದ್ದಿ ಕನ್ನಡ ವಾರ್ತೆ
ಜೋಯಿಡಾ:71ನೇ ವನ್ಯ ಜೀವಿ ಸಪ್ತಾಹರಾಕ್ ನಲ್ಲಿ ಇದೇ ದಿನಾಂಕ 3ರಂದು ಆರಂಭ ವಾಗಲಿದೆ. ಕೆನರಾ ಅರಣ್ಯ ವೃತ್ತ ಶಿರಸಿ ಕಾಳಿ ಹುಲಿ ಸಂರಕ್ಸಿತ ಪ್ರದೇಶ, ಇವರಿಂದ ವನ್ಯ ಜೀವಿ ಸಪ್ತಾಹ, ಕ್ಯಾಸ್ಟಲ್ ರಾಕ್ ನ ತೆಂಗು,ನಾರು ಉತ್ಪಾದನಾ ಘಟಕ ದಲ್ಲಿ ಇದೇ ಶುಕ್ರವಾರಬೆಳಿಗ್ಗೆ10,ಘಂಟೆಗೆ ನಡೆಯಲಿದೆ .
ಕಾರ್ಯಕ್ರಮ ಉದ್ಘಾಟನೆ ಯನ್ನು ಮಾಡಿ ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನುರಾಜ್ಯ ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷ ರು ಹಳಿಯಾಳ ಜೋಯಿಡಾ ಕ್ಷೆತ್ರದ ಶಾಸಕರೂ ಆಗಿರುವ ಆರ್ ವಿ ದೇಶಪಾಂಡೆ ಯವರು ವಹಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ಅರಣ್ಯ ವೃತ್ತ ಶಿರಸಿ ಯ ಟಿ ಹೀರಾಲಾಲ ವಹಿಸಲಿದ್ದಾರೆ. ಕಾರ್ಯಕ್ರಮ ದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ, ಪ್ರಶಾಂತ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಶಿಂದೆ ಭಾರತೀಯ ರೈಲ್ವೆ ಇಲಾಖೆಯ ಮಹೇಶ ಬದಾಳೆ ಕ್ಯಾಸ್ಟಲ್ ರಾಕ್ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ರೆಡ್ಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಾಂಡೇಲಿ ಯ ಎಂ ಎಸ್, ಕಳ್ಳಿ ಮಠ್ ಸಹಾಯಕಅರಣ್ಯಸಂರಕ್ಷಣಾಧಿಕಾರಿ ಕುಂಬಾರವಾಡದ ಗಿರೀಶ ಸಂಕ್ರಿ ಇತರರು ಉಪಸ್ಥಿತರಿರಲಿದ್ದಾರೆಎಂದುಅರಣ್ಯಇಲಾಖೆಯ ಪ್ರಕಟಣೆ ತಿಳಿಸಿದೆ. ಒಂದು ವಾರ ಗಳ ಕಾಲ ವಿವಿಧ ಕಾರ್ಯಕ್ರಮ ಗಳು ನಡೆಯಲಿದೆ.