ಸುದ್ಧಿಕನ್ನಡ ವಾರ್ತೆ
ಪಣಜಿ: ಸದ್ಯ ದೇಶಾದ್ಯಂತ ನವರಾತ್ರಿ ಉತ್ಸವ ಭಕ್ತಿಭಾವದಿಂದ ಜೋರಾಗಿ ನಡೆಯುತ್ತಿದೆ.ಮಹಾರಾಷ್ಟ್ರ,ಗುಜರಾತ್, ಪಶ್ಚಿನ ಬಂಗಾಳ, ಉತ್ತರಪ್ರದೇಶ,ರಾಜಸ್ಥಾನ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ದುರ್ಗೆಯ ಉತ್ಸವವನ್ನು ಭಕ್ತಿಭಾವದಿದ ನೆರವೇರಿಸಲಾಗುತ್ತಿದೆ. ನವರಾತ್ರಿಯ ಸಂದರ್ಭದಲ್ಲಿ ದಾಂಡಿಯಾ ಗರಬ್ ನೃತ್ಯ ನಡೆಸಲಾಗುತ್ತದೆ. ಗುಜರಾತಿ ಗರಬ್ ನೃತ್ಯವನ್ನು ದೇಶಾದ್ಯಂತ ನಡೆಸಲಾಗುತ್ತದೆ. ಇಷ್ಟೇ ಅಲ್ಲದೆಯೇ ದೇಶದ ವಿವಿದೆಡೆ ವಾಸಿಸುವ ಗುಜರಾತಿ ಜನರು ದಾಂಡಿಯಾ ಗರಬ್ ನೃತ್ಯ ಮಾಡುತ್ತಾರೆ. ಸದ್ಯ ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಗರಬ್ ನೃತ್ಯ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.
ಗೋವಾದಿಂದ ಗುಜರಾತ್ ಗೆ ತೆರಳಬೇಕಿದ್ದ ವಿಮಾನ ಸುಮಾರು 5 ಗಂಟೆ ವಿಳಂಭವಾಯಿತು. ಇದರಿಂದಾಗಿ ಬೇಸರಗೊಂಡಿದ್ದ ಗುಜರಾತಿ ಪ್ರಯಾಣಿಕರು ಗೋವಾದ ಮೋಪಾ ವಿಮಾನ ನಿಲ್ದಾಣದಲ್ಲಿಯೇ ಗರಬ್ ನೃತ್ಯ ಆರಂಭಿಸಿದರು. ಈ ಗರಬ್ ನೃತ್ಯದಲ್ಲಿ ವಿಶೇಷವೆಂದರೆ ಅಲ್ಲಿದ್ದ ಸಿಬ್ಬಂಧಿಗಳು ಕೂಡ ಪಾಲ್ಗೊಂಡಿದ್ದರು. ಈ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಸಮಯಕ್ಕೆ ಸರಿಯಾಗಿ ವಿಮಾನ ಬಾರದೇ ಇದ್ದುದರಿಂದ ಪ್ರಯಾಣಿಕರು ಗರಬ್ ನೃತ್ಯ ನಡೆಸಿದ್ದು ಭಾರಿ ಚರ್ಚೆಗೆ ಕೂಡ ಕಾರಣವಾಗಿದೆ.
ಲಭ್ಯವಾಗಿರುವ ಮಾಹಿತಿಯ ಅನುಸಾರ- ಉತ್ತರ ಗೋವಾದ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಸಂಜೆ 5 ಗಂಟೆಗೆ ಸೂರತ್ ಗೆ ವಿಮಾನ ತೆರಳಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ವಿಮಾನ ಆಗಮಿಸಲು ಸುಮಾರು 5 ಗಂಟೆ ವಿಳಂಭವಾಯಿತು. ಗೋವಾದಿಂದ ಸೂರತ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ನವರಾತ್ರಿ ಉತ್ಸವಕ್ಕೆ ತೆರಳುವವರಿದ್ದರು. ಆದರೆ ವಿಮಾಣ ವಿಳಂಭವಾಗುತ್ತಿದ್ದಂತೆಯೇ ಈ ಪ್ರಯಾಣಿಕರು ಬೇಸರಗೊಂಡು ವಿಮಾನ ನಿಲ್ದಾಣದಲ್ಲಿಯೇ ದಾಂಡಿಯಾ ಗರಬ್ ನೃತ್ಯ ಆರಂಭಿಸಿದರು. ಈ ವೀಡಿಯೊ ಸದ್ಯ ಭಾರಿ ವೈರಲ್ ಆಗಿದೆ.
ಈ ದಾಂಡಿಯಾ ಗರಬ್ ನೃತ್ಯದಲ್ಲಿ ಅಲ್ಲಿನ ಸಿಬ್ಬಂಧಿಗಳು ಮತ್ತು ಗಗನ ಸಖಿಯರು ಕೂಡ ಪಾಲ್ಗೊಂಡಿರುವುದು ಕಂಡುಬರುತ್ತದೆ. ಈ ಸಂದರ್ಭದಲ್ಲಿ ಇತರೆಡೆ ತೆರಳಬೇಕಿದ್ದ ಪ್ರಯಾಣಿಕರು ಕೂಡ ಈ ದಾಂಡಿಯಾ ಗರಬ್ ನೃತ್ಯದ ಆನಂದ ಸವಿದರು.