ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ಸಪ್ತ ಸ್ವರ ಸೇವಾ ಸಂಸ್ಥೆ ಯವರು ಸಂಯುಕ್ತ ಆಶ್ರಯದಲ್ಲಿ 10ನೇ ಯಕ್ಷ ದಶಮಾನೋತ್ಸವ ಕಾರ್ಯಕ್ರಮ ವನ್ನು ಹಮ್ಮಿ ಕೊಂಡಿದ್ದಾರೆ.

ಅಕ್ಟೊಬರ್ 7ರಿಂದ 16 ರ ವರೆಗೆ ಯರಮುಖ ದ ಬಯಲು ರಂಗ ಮಂದಿರದಲ್ಲಿ ಪ್ರತಿದಿನ ಸಂಜೆ 6 30ರಿಂದ ಸೀಮಿತ ಅವಧಿಯ ವರೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ದ ಆರಂಭದ ದಿನ ಅಕ್ಟೊಬರ್ 7ರಂದು ಶ್ರೀ ಸೋಮೇಶ್ವರ ದೇವಸ್ಥಾನ ಯರಮುಖ ದಲ್ಲಿ ಶತ ರುದ್ರ ಹವನ ನಡೆಯಲಿದೆ. ಅದೇ ದಿನ ಸಾಯಂಕಾಲ 6 30ರಿಂದ ಯಕ್ಷ ದಶಮಾನೋತ್ಸವ ದ ಉದ್ಘಾಟನಾ ಸಮಾರಂಭ ನಡೆಯಲಿದೆ.

ನಂತರ ಧರ್ಮಾoಗದ ದಿಗ್ವಿಜಯ ಯಕ್ಷಗಾನ ಪ್ರಸಂಗ ನಡೆಯಲಿದೆ. ನಂತರ ದಿ 8ರಂದು ಕಂಸ ವಧೆ, ದಿ 9ರಂದು ಮಾಯಾಪುರಿ ಮಹಾತ್ಮೆ,, ದಿ 10ರಂದು ಚಂದ್ರಾ ವಳಿ ವಿಲಾಸ, ದಿ 11ರಂದು ಮಾಯಾಪುರಿ ಮಹಾತ್ಮೆ,,, ದಿ 12 ರಂದು ರುಕ್ಮಿಣಿ ವಿವಾಹ,, ದಿ 13 ರಂದುಸಂಜೆ ಭಸ್ಮಾಸುರ ಮೋಹಿನಿ,,ದಿ 14ರಂದು ಹಿರಣ್ಯಾಕ್ಷ ವಧೆ, ದಿ 15 ರಂದು ಪಾಂಚಜನ್ಯ ಮತ್ತು ದಿ 16 ರಂದು ಗಧಾ ಯುದ್ಧ ಯಕ್ಷ ಗಾನ ಪ್ರಸಂಗ ಗಳು ನಡೆಯಲಿವೆ. ಈ ಎಲ್ಲ ಯಕ್ಷಗಾನ ಕಾರ್ಯಕ್ರಮ ದ ಹಿಮ್ಮೆಳ ದಲ್ಲಿ ಭಾಗವತರಾಗಿ ಆನಂದು ಆಗೇರ ಅಂಕೋಲಾ ಮತ್ತು ಸಂಗಡಿಗರಾಗಿ ಪರಮೇಶ್ವರ್ ಬಂಡಾರಿ, ದೀಕ್ಷಿತ್ ಆಗೇರ, ಪ್ರಶಾಂತ ಹೆಗಡೆ, ಗಣಪತಿ ಹೆಗಡೆ, ಮತ್ತು ಸುಬ್ರಮಣ್ಯ ಭಟ್ ಸಾತ್ ನೀಡಲಿದ್ದಾರೆ.

ಈ ಸೀಮಿತ ಅವಧಿಯ ಯಕ್ಷಗಾನ ಕಾರ್ಯಕ್ರಮ ನಡೆದ ನಂತರ ಪ್ರೇಕ್ಷಕೆ ರಿಗೆ ಊಟದ ವ್ಯವಸ್ಥೆ ಯನ್ನು ದಾನಿ ಪರಮೇಶ್ವರ್ ಸಿದ್ದಿ ದಂಪತಿಗಳು, ಸ್ವರ್ಗಸ್ಟ ತಮ್ಮ ಹಿರಿಯರ ಹೆಸರಿನಲ್ಲಿ ಮಾಡಿದ್ದಾರೆ ಎಂದು ಸಂಸ್ಥೆ, ಪ್ರಕಟಿಸಿದೆ.