ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಪ್ರಸಕ್ತ ನವೆಂಬರ್ 20 ರಿಂದ 28 ರವರೆಗೆ 56 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪ್ರತಿನಿಧಿಗಳ ನೋಂದಣಿ ಆರಂಭಗೊಂಡಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಸಿನಿ ಪ್ರೇಮಿಗಳು ಹಾಗೂ ಪ್ರತಿನಿಧಿಗಳು ಇಫಿ ಅಧೀಕೃತ ವೆಬ್ ಸೈಟ್ ನಲ್ಲಿ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಭಾರತೀಯ ಹಾಗೂ ಅಂತರಾಷ್ಟ್ರೀಯ ಚಲನಚಿತ್ರಗಳ ಮಹಾಕುಂಭದ ಅನುಭವವನ್ನು ಈ ಚಲನಚಿತ್ರೋತ್ಸವದ ಮೂಲಕ ಪಡೆದುಕೊಳ್ಳಲು ಸಾಧ್ಯವಾಗಲಿದೆ.
ಗೋವಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪ್ರತಿನಿಧಿಗಳಾಗಿ ಪಾಲ್ಗೊಳ್ಳಲು 1180 ರೂ ಭರಿಸವೇಕಾಗಿದೆ. ವಿಶೇಷವೆಂದರೆ ವಿದ್ಯಾರ್ಥಿಗಳಿಗಾಗಿ ಪ್ರತಿನಿಧಿ ಶುಲ್ಕವನ್ನು ವಿಧಿಸದೆಯೇ ಉಚಿತ ಪ್ರವೇಶ ಅವಕಾಶ ನೀಡಲಾಗಿದೆ. ಇದರಿಂದಾಗಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೃಹತ್ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪಾಲ್ಗೊಳ್ಳಲು ಅವಕಾಶ ಲಭಿಸಲಿದೆ. ಪ್ರತಿನಿಧಿ ಶುಲ್ಕ ಭರಿಸದೆಯೇ ಇದ್ದಲ್ಲಿ ಟಿಕೇಟ್ ಪಡೆದು ಚಲನಚಿತ್ರ ವೀಕ್ಷಿಸಬಹುದಾಗಿದೆ.
ಪ್ರಸಕ್ತ 56 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಗತ್ತಿನ ವಿವಿಧ ದೇಶಗಳ ಆಯ್ದ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಪ್ರಸಕ್ತ ವರ್ಷ ಜಗತ್ತಿನ 105 ದೇಶಗಳ ಆಯ್ದ 270 ಕ್ಕೂ ಅಧಿಕ ಚಲನ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಇಷ್ಟೇ ಅಲ್ಲದೆಯೇ ಇಂಡಿಯನ್ ಪನೀರಮಾ ವಿಭಾಗದಲ್ಲಿ ಆಯ್ದ 25 ಪಿಚ್ಚರ್ ಫಿಲ್ಮ ಹಾಗೂ 20 ನಾನ್ ಪಿಚ್ಚರ್ ಫಿಲ್ಮ ವೀಕ್ಷಿಸಬಹುದಾಗಿದೆ.
ಅಂತರಾಷ್ಟ್ರೀಯ ಚಲನಚಿತ್ರೋತ್ಸವದೊಂದಿಗೆ 19 ನೇಯ ಎನ್ ಎಫ್ ಡಿಸಿ ಫಿಲ್ಮ ಬಜಾರದ ನೋಂದಣಿ ಕೂಡ ಆರಂಭಗೊಂಡಿದೆ. ಈ ಫಿಲ್ಮ ಬಜಾರವು ಚಲನಚಿತ್ರ ನಿರ್ಮಾಪಕರಿಗೆ, ನಿರ್ದೇಶಕರು , ವಿತರಕರು ಹಾಗೂ ಹೂಡಿಕೆದಾರರಿಗೆ ಮಹತ್ವದ ವೇದಿಕೆಯಾಗಿದೆ. ವೇವಿಂಗ್ ರೂಂ-2025 ಇದು ಚಲನಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಲಿದೆ.