ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ತಾಲೂಕಿನ ನಂದಿಗದ್ದಾ ಕೃಷಿ ಸೇವಾ ಸಹಕಾರಿ ಸಂಘ ನೀ ಯರಮುಖ,ಇಲ್ಲಿನ ವಾರ್ಷಿಕ ಸರ್ವ ಸಾದಾರಣ ಸಭೆ, ಶುಕ್ರವಾರ ನಡೆಯಿತು .
ಸದಸ್ಯರು ಅತ್ಯಂತ ಉತ್ಸಾಹ ದಿಂದ ಸಭೆಯಲ್ಲಿ ಪಾಲ್ಗೊಂಡು ಚರ್ಚೆ ಯಲ್ಲಿ ಭಾಗವಹಿಸಿದರು. ಸಂಘದ ಅಧ್ಯಕ್ಷರು ಇಂದಿನ ಸಭೆಯ ಅಧ್ಯಕ್ಷರೂ ಆಗಿರುವ, ರಾಮಕೃಷ್ಣ ದಾನಗೇರಿ ಅವರು ಸಂಘದ, ಸಾಂಪತ್ತಿಕ ಸ್ಥಿತಿಯನ್ನು ವಿವರಿಸಿದರು, ಸಂಘದ ಮುಂದಿನ ಯೋಜನೆ ಗಳ ಕುರಿತು ತಿಳಿಸಿ ಎಲ್ಲ ಸದಸ್ಯರ ಸಹಕಾರ ಕೋರಿದರು. ಸಂಘದ ಉಪಾಧ್ಯಕ್ಷ, ಸುಧರ್ಶನ್ ಭಾಗವತ, ಮುಖ್ಯ ಕಾರ್ಯನಿರ್ವಾಹಕ, ಶಿವರಾಮ ದಬಾಗಾರ ಸಿಬ್ಬಂದಿ ಗಳಾದ ಸಂಪತ್ ಹೆಗಡೆ, ಸಂದ್ಯಾ ಭಟ್ ಮತ್ತು ಸುರೇಶ ಸದಸ್ಯರು ಕೇಳಿದ ಪ್ರಶ್ನೆ ಗಳಿಗೆ ಅಧ್ಯಕ್ಷರು ಉತ್ತರ ಕೊಡುವಲ್ಲಿ ಸಹಕರಿಸಿದರು .
ಸಂಘದ ಸದಸ್ಯರಿಗೆ, ಸಭೆಯ ಮಾಹಿತಿ ಒದಗಿಸುವಲ್ಲಿ, ಜೋನ್ ಪೆರೇರಾ, ಕಲ್ಪನಾ ದೇಸಾಯಿ, ದಯಾನಂದ ಕುಟ್ಟಿಕರ್ ಕೃಷ್ಣ, ಗಾವಕರ್ ಶ್ರೀಲತಾ ಇತರರು ಸಹಕರಿಸಿದರು.ಕಾರ್ಯಕ್ರಮ ದಲ್ಲಿ ನಂದಿಗದ್ದೆ ಗ್ರಾಮ ಪಂಚಾಯತಅಧ್ಯಕ್ಷ ಅರುಣ ದೇಸಾಯಿ ಸಂಘದ ಸದಸ್ಯರು ನಿವೃತ್ತ ಶಿಕ್ಷಕರಾದ, ಜನಾರ್ಧನ್ ಹೆಗಡೆ, ವಿನಾಯಕ್ ಗಾಂವ್ ಕರ್ ಮತ್ತು ವಿದ್ಯುತ್ ಪ್ರಸರಣ ನಿಗಮದ ಜಿಲ್ಲಾ ಅಧಿಕಾರಿ ಪುರುಷೋತ್ತಮ್ ಮಲ್ಯ, ಉತ್ತಮ ಕೃಷಿಕ ಸೀತಾರಾಮ್ ಹೆಗಡೆ ಕುಶಾಲಮತಿ ಭಟ್ ಮತ್ತು ಸಾಧನೆ ಮಾಡಿದ ವಿದ್ಯಾರ್ಥಿ ಗಳಿಗೆ ಗೌರವ ಪೂರ್ವಕ, ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಉಚಿತ ವಾಗಿ ಕೃಷಿ ಉಪಕರಣ ಪಾವಡಾ ನೀಡಿ ಸಂಘದ ಜೊತೆ, ಸದಾ ವ್ಯವಹರಿಸಲು ಕೇಳಿಕೊಳ್ಳಲಾಯಿತು. ಒಟ್ಟಾರೆ 67 ನೇ ವರ್ಷದ ವಾರ್ಷಿಕ ಮಹಾಸಭೆ ರಾಷ್ಟ್ರ ಗೀತೆ ಯೊಂದಿಗೆ ಮುಗಿಯಿತು