ಸುದ್ಧಿಕನ್ನಡ ವಾರ್ತೆ
ಭಟ್ಕಳ: ಅತ್ಯಂತ ಸುಧೀರ್ಘ ಸಮಯದ ತಮ್ಮ ರಾಜಕೀಯ ಜೀವನದಲ್ಲಿ ಬಹುದೊಡ್ಡ ಆರೋಪ ಬಂದಾಗ ತಕ್ಷಣ ಸಿದ್ಧರಾಮಯ್ಯ ಅವರು ಮುಖ್ಯ ಮಂತ್ರಿ ಸ್ಥಾನವನ್ನು ತ್ಯಜಿಸಬೇಕಿತ್ತು, ಇಂದೂ ಕೂಡಾ ಕಾಲ ಮಿಂಚಿಲ್ಲ ತಕ್ಷಣ ತನ್ನ ಹುದ್ದೆಯನ್ನ ತ್ಯಜಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು. ಅವರು ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕರ್ನಾಟಕ ಸರಕಾರದ ಮಾನ ಮರ್ಯಾದೆ ದೇಶ ಮಟ್ಟದಲ್ಲಿ ದಿನದಿಂದ ದಿನಕ್ಕೆ ಹರಾಜಾಗುತ್ತಿದ್ದರೂ ಕೂಡಾ ರಾಜೀನಾಮೆ ನೀಡದೇ ಇರುವುದು ಸರಿಯಲ್ಲ. ಸುಧೀರ್ಘವಾದ ರಾಜಕೀಯ ಅನುಭವ ಇರುವವರು ಹಾರಿಕೆಯ ಉತ್ತರ ಕೊಡುವುದು ಅವರ ಘನತೆ, ಗೌರವಕ್ಕೆ ತಕ್ಕುದಾದುದಲ್ಲ. ಅನುಭವ ಇರುವವರು ಹಾರಿಕೆಯ ಉತ್ತರವನ್ನು ನೀಡಬಾರದು ಎಂದ ಅವರು ಸಿದ್ಧರಾಮಯ್ಯ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದೂ ಆರೋಪಿಸಿದರು. ಮುನಿರತ್ನಮ್ ಅವರು ತಪ್ಪು ಮಾಡಿದ್ದರೆ ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಆಗಲಿ ಆದರೆ ತೆಗೆದುಕೊಂಡ ಕ್ರಮ ಎಂತವರಿಗಾದರೂ ಸೇಡಿನ ರಾಜಕೀಯ ಎಂದು ಅರಿವಾಗುತ್ತದೆ. ಅವರು ತಪ್ಪು ಮಾಡಿದ್ದರೆ ಅವರಿಗೆ ನೋಟೀಸು ಕೊಟ್ಟು ಕ್ರಮ ಜರುಗಿಸುವುದಕ್ಕೆ ಅವಕಾಶ ಇತ್ತು. ಆದರೆ ಅದ್ಯಾವುದನ್ನೂ ಮಾಡಬೇ ಎಲ್ಲೋ ಹೋಗುತ್ತಿದ್ದವರನ್ನು ಎಳೆದು ತಂದು ಜೈಲಿನಲ್ಲಿ ಕೂರಿಸುವ ಕ್ರಮ ಮಾತ್ರ ಸರಿಯಲ್ಲ ಎಂದರು.
ಅಲ್ಪ ಸಂಖ್ಯಾತರ ಓಲೈಕೆಯಲ್ಲಿ ರಾಜ್ಯದ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿರುವ ಮುಖ್ಯ ಮಂತ್ರಿಯವರು ಅತಿಯಾದ ಓಲೈಕೆ ರಾಜ್ಯದ ಕೆಲವು ಕಡೆಗಳಲ್ಲಿ ಅಹಿತಕರ ಘಟನೆಗೆ ಕಾರಣವಾಯಿತು ಎಂದ ಅವರು ಮಂಡ್ಯ, ಮಂಗಳೂರು ಹಾಗೂ ಚಿಕ್ಕಮಂಗಳೂರು ಘಟನೆಗಳು ಖಂಡನೀಯ. ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವ ಮುಖ್ಯ ಮಂತ್ರಿಗಳು ತಮ್ಮ ವಾಲ್ಮೀಕಿ ನಿಗಮದ ಹಗರಣ ಮುಚ್ಚಿಕೊಳ್ಳಲು ಚಿತ್ರನಟ ದರ್ಶನ್ ಅವರ ವಿಚಾರಣೆಯ ವಿವರಗಳನ್ನು ಬಹಿರಂಗ ಪಡಿಸಿ ಜನರ ಭಾವನೆಗಳನ್ನು ಅತ್ತಕಡೆಗೆ ತಿರುಗಿಸುವ ಕುತಂತ್ರ ಮಾಡಿದ್ದಾರೆ. ಅಭಿವೃದ್ಧಿಯಲ್ಲಿ ರಾಜ್ಯ ಶೂನ್ಯವಾಗಿದೆ. ಪ್ರತಿ ಹಂತದಲ್ಲಿಯೂ ರಾಜ್ಯ ಸರಕಾರ ವಿಫಲವಾಗಿದ್ದು ರಾಜ್ಯವನ್ನು ದಿವಾಳಿ ತೆಗೆದಿದ್ದಾರೆ ಎಂದೂ ಕಿಡಿ ಕಾರಿದರು. ಯಾರೇ ಆಗಲಿ ಬೇರೆ ನಮ್ಮ ದೇಶದಲ್ಲಿದ್ದುಕೊಂಡು ಬೇರೆ ದೇಶದ ಧ್ವಜ ಹಾರಿಸುತ್ತಾರೆ ಎಂದರೆ ಪೊಲೀಸರು ಅವರ ಮೇಲೆ ಸುಮೋಟೋ ಪ್ರಕರಣ ದಾಖಲಿಸಬೇಕು. ಅದಕ್ಕೆ ನಮ್ಮ ದೇಶದಲ್ಲಿ ಅವಕಾಶ ಕೊಡಬಾರದು ಎಂದೂ ಆಗ್ರಹಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಅತ್ಯಂತ ಉತ್ತಮ ರೀತಿಯಲ್ಲಿ ಆಗುತ್ತಿದ್ದು ಕಾರ್ಯಕರ್ತರು ಚುನಾವಣೆಯಲ್ಲಿ ಭಾಗವಹಿಸಿದ ರೀತಿಯಲ್ಲಿಯೇ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಸೆಪ್ಟಂಬರ್ ೨ರಂದು ದೇಶದಲ್ಲಿ ೮೮೦೦೦೦೨೦೨೪ ನಂಬ್ರಕ್ಕೆ ಮಿಸ್ಡ ಕಾಲ್ ಕೊಡುವ ಮೂಲಕ ಬಿ.ಜೆ.ಪಿ. ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನ ಮಂತ್ರಿ ನರೇಂದ್ರ ಮೋದೀಜಿ, ಅಮಿತ್ ಶಾ ಸೇರಿದಂತೆ ಪ್ರಮುಖರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಜಿಲ್ಲೆಯಲ್ಲಿಯೂ ಕೂಡಾ ಸದಸ್ಯತ್ವ ಅಭಿಯಾನ ಬಿರುಸಿನಿಂದ ಸಾಗುತ್ತಿದ್ದು ಪ್ರಥಮ ಹಂತದ ಅಭಿಯಾನ ಸೆ.೨೫ಕ್ಕೆ ಮುಕ್ತಾಯಗೊಳ್ಳಿದೆ. ಬೂತ್ ಮಟ್ಟದಿಂದ ದೇಶ ಮಟ್ಟದ ತನಕ ಸದಸ್ಯತ್ವ ಅಭಿಯಾನದ ಸಭೆ ನಡೆಯುತ್ತಿದ್ದು ಉತ್ತರ ಕನ್ನಡದಲ್ಲಿಯೂ ಕೂಡಾ ಸಭೆಗಳು ನಡೆಯುತ್ತಿವೆ. ಜಿಲ್ಲಾ ಮಟ್ಟದ ಸಭೆಯಲ್ಲಿ ಸುನಿಲ್ ಕುಮಾರ್ ಭಾಗವಹಿಸಿ ಅಭಿಯಾನದ ಸಮರ್ಪಕ ಅನುಷ್ಟಾನಕ್ಕೆ ಮಾಹಿತಿ ನೀಡಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ೪ ಲಕ್ಷ ಸದಸ್ಯತ್ವದ ಗುರಿಯನ್ನು ಹೊಂದಲಾಗಿದ್ದು ಭಟ್ಕಳ ತಾಲೂಕಿನಲ್ಲಿ ೪ ಲಕ್ಷ ಗುರಿಯನ್ನು ಹೊಂದಲಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಾಡಿಗ ಹಾಗೂ ಶ್ರೀಕಾಂತ್ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತರಾಮ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ ಮತ್ತು ಶ್ರೀಧರ ನಾಯ್ಕ, ಮಂಡಲ ಉಪಾಧ್ಯಕ್ಷರಾದ ಗಣಪತಿ ದೇವಾಡಿಗ ಮತ್ತು ಮಂಜಪ್ಪ ನಾಯ್ಕ, ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ರವಿ ನಾಯ್ಕ ಜಾಲಿ, ಜಿಲ್ಲಾ ಮೀನುಗಾರಿಕಾ ಪ್ರಕ್ಕೊಸ್ಟ ಸಂಚಾಲಕ ಭಾಸ್ಕರ ದೈಮನೆ, ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಜಿಲ್ಲಾ ಸಹ ಸಂಚಾಲಕರಾದ ಮೋಹನ ನಾಯ್ಕ ಮುಂತಾದವರಿದ್ದರು.
** ಅಕ್ಟೋಬರ್ ೨ರ ಗಾಂಧಿ ಜಯಂತಿಯAದು ಹಮ್ಮಿಕೊಂಡ ಸ್ವಚ್ಚತಾ ಆಂದೋಲನ ಜನಾಂದೋಲನವಾಗಬೇಕು. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಧಿಕಾರಿಗಳು, ಶಾಲಾ ಶಿಕ್ಷಕರು, ಅಧಿಕಾರಿಗಳು, ನೌಕರರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರು, ಜನ ಪ್ರತಿನಿದಿಗಳು ಎಲ್ಲರೂ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡು ಯಶಸ್ವೀಗೊಳಿಸಬೇಕು. ಅಂದು ಗಿಡ-ಗಂಟಿಗಳನ್ನು ಕೀಳುವ ಕೆಲಸವನ್ನು ಇಟ್ಟುಕೊಳ್ಳದೇ ಕೇವಲ ಪ್ಲಾಸ್ಟಿಕ್, ಗ್ಲಾಸು, ಕಬ್ಬಣ ಹಾಗೂ ರಬ್ಬರ್ ಇವುಗಳನ್ನು ಮಾತ್ರ ಆರಿಸಿ ಸಂಗ್ರಹಿಸಬೇಕು. ಸರಕಾರ ಅಭಿವೃದ್ಧಿ ಕೆಲಸವನ್ನಷ್ಟೇ ಮಾಡುತ್ತದೆ. ಸ್ವಚ್ಚತೆಯ ಕಾರ್ಯಕ್ಕೆ ಜನರ ಸಹಕಾರ ಇಲದೇ ಸಾಧ್ಯವಿಲ್ಲ. ಜನರು ಒಟ್ಟಾಗಿ ಸ್ವಚ್ಚತೆಯನ್ನು ಮಾಡಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಜನತೆಗೆ ಕರೆ ನೀಡಿದ್ದಾರೆ.