ಸುದ್ದಿ ಕನ್ನಡ ವಾರ್ತೆ
ಧಾರವಾಡ-ಕನ್ನಡದ ಶಕ್ತಿ ಕೇಂದ್ರ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮತ್ತು ಜಾನಪದ ಮಂಟಪದ ಸಲಹಾ ಸಮಿತಿ ಸಭೆ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಂಕರ ಹಲಗತ್ತಿ, ಕಲಾ ಮತ್ತು ಜಾನಪದ ಮಂಟಪ ಸಂಚಾಲಕರಾದ ಡಾ. ಮಹೇಶ ಧ.ಹೊರಕೇರಿ ಅವರ ನೇತೃತ್ವದಲ್ಲಿ ದಿ. 22ರಂದು ಸಾಯಂಕಾಲ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸೇರಿ 2025- 26 ನೇ ಸಾಲಿನಲ್ಲಿ ನಡೆಯುವ ಚಟುವಟಿಕೆಗಳ ಕುರಿತು ವಿವರವಾಗಿ ಚರ್ಚಿಸಿ ರಾಜ್ಯದ ವಿವಿಧ ಕಡೆಗೆ ಕಲಾ ಮತ್ತು ಜಾನಪದ ಮಂಟಪದ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.ದಿ.28ರಂದು ಹುಬ್ಬಳ್ಳಿಯ ಶಿರೂರ ಪಾರ್ಕದಲ್ಲಿ ಮಂಟಪದ ಮೊದಲನೇ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಸಲಹಾ ಸಮಿತಿಯ ಸದಸ್ಯರಾದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಗಣಪತಿ ದೇವೇಂದ್ರಪ್ಪ ಬಡಿಗೇರ, ಶ್ರೀಮತಿ ಜಯಶ್ರೀ ಎಸ್. ಪಾಟೀಲ, ಕಲ್ಲನಗೌಡ ಶಿವನಗೌಡ ಸಿದ್ಧಾಪುರ, ಲಾಲಸಾಬ ರಸೂಲಸಾಬ ಬೂದಿಹಾಳ, ರುದ್ರಗೌಡ ಶಂಕರಗೌಡ ಬಾಳನಗೌಡರ ಸಭೆಯಲ್ಲಿ ಭಾಗವಹಿಸಿ ಅನೇಕ ಸಲಹೆ ಸೂಚನೆ ನೀಡಿ ಎಲ್ಲಾ ಕಾರ್ಯಕ್ರಮಗಳಿಗೆ ತಾವು ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು.