ಸುದ್ಧಿಕನ್ನಡ ವಾರ್ತೆ
ಗಣೇಶ ಚತುರ್ಥಿ ಬಂದಿತೆಂದರೆ ಎಲ್ಲೆಡೆ ಸಂಭ್ರಮ ಕಂಡುಬರುತ್ತದೆ. ಗಣೇಶನ ಆಗಮನವೇ ಒಂದು ವಿಶೇಷ. ಬಗೆ ಬಗೆಯ ಪರಿಸರ ಸ್ನೇಹಿ ಗಣಪನನ್ನು ತಯಾರಿಸುವುದನ್ನು ಕಾಣಬಹುದು. ಗೋವಾದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಮುಖವಾಗಿ ತೆಂಗಿನ ಗರಿ ಮತ್ತು ತೆಂಗಿನ ಚುಪಟ್ಟು ಮತ್ತಿತರ ಪರಿಸರ ವಸ್ತುಗಳನ್ನು ಬಳಸಿ ಅತ್ಯಾಕರ್ಷಣೀಯ ಗಣಪನ ಕಲಾಕೃತಿಯನ್ನು ಚಿತ್ರಿಸಿರುವುದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ಗೋವಾದ ವೆಳಗೆ ಊರಿನ ಶ್ರೀಮತಿ ವಿದ್ಯಾಲಯ ವಿದ್ಯಾರ್ಥಿಗಳು ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ “ಕಲ್ಪವೃಕ್ಷ ಕಲಾಧಿಪತಿ 2025” ರ ಅಡಿಯಲ್ಲಿ ಇಕೊಫ್ರೆಂಡ್ಲಿ ಪ್ಲೋರಲ್ ಆರ್ಟ ಇನ್ ಸ್ಟಾಲೇಶಮ್ ಸಾದರಪಡಿಸಿದ್ದಾರೆ. ಇದರಲ್ಲಿ ಸೃಜನಶೀಲತೆ, ಪರಿಸರ ಪ್ರೇಮ, ಹಾಗೂ ಸಂಸ್ಕøತಿಯ ಸಂಗಮವಾಗಿದೆ.

ವಿದ್ಯಾರ್ಥಿಗಳು ತೆಂಗಿನ ಗರಿ, ಸೇರಿದಂತೆ ವಿವಿಧ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಿಕೊಂಡು ಸುಂದರ ಗಣಪನ ಕಲಾಕೃತಿಯನ್ನು ರಚನೆ ಮಾಡಿದ್ದಾರೆ. ಇದು ಪರಿಸರ ಜಾಗರೂಕತೆಯ ಒಂದು ಸಂದೇಶವೂ ಆಗಿದೆ. ಶಾಲೆಯ ಕಲಾ ಶಿಕ್ಷಕರಾದ ಯೋಗೇಶ ವಿಷ್ಣು ಕವಠಣಕರ್ ರವರ ಪ್ರೇರಣಾದಾಯಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸುಂದರ ಗಣಪನ ಕಲಾಕೃತಿಯನ್ನು ರಚಿಸಿದ್ದಾರೆ. ಈ ಉತ್ತಮ ಕಾರ್ಯಕ್ಕೆ ಶಾಲೆಯ ಕರ್ಮಚಾರಿಗಳ ಸಹಕಾರವೂ ಇದೆ.

ಈ ಪ್ರದರ್ಶನವು ಕೇವಲ ಒಂದು ಕಲಾಕೃತಿ ಮಾತೃವಲ್ಲ, ಇದು ಸಮಾಜಕ್ಕೆ ಒಂದು ಸಂದೇಶವೂ ಆಗಿದೆ.