ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಗೋವಾದ ಮಡಗಾಂವನಲ್ಲಿ ಗ್ಯಾಂಗ್ ವಾರ್ ನಡೆದಿದೆ. ಈ ಗ್ಯಾಂಗ್ ವಾರ್ ನಲ್ಲಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಗ್ಯಾಂಗ್ ವಾರ್ ಗೆ ಇತ್ತೀಚೆಗೆ ಮಡಗಾಂವ ಕೋಲ್ವಾ ಸರ್ಕಲ್ ನಲ್ಲಿ ನಡೆದಿದ್ದ ಮಾರಾಮಾರಿಗೆ ಸಂಬಂಧವಿದೆ ಎಂದೇ ಹೇಳಲಾಗುತ್ತಿದೆ.
ಈ ಹಿಂದೆ ತಮ್ಮ ಮೇಲೆ ನಡೆದಿದ್ದ ಹಲ್ಲೆಯ ಸೇಡು ತೀರಿಸಿಕೊಳ್ಳಲು ಈ ಗ್ಯಾಂಗ್ ªರ್ ನಡೆಸಲಾಗಿದೆಯೇ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಬಂಧಿತ ಆರೋಪಿಗಳು-ರಶುಲ್ ವಶೇಖ್ (23), ವಿಲ್ ಸನ್ ಕಾರ್ವಾಲ್ಹೊ(25), ಶಾರುಖ್ ಶೇಖ್ (26), ಮೊಹಮ್ಮದ್ ಅಲಿ(24), ಸೂರಜ್ ಮಾಜಿ(19), ಗೌರಾಂಗ್ ಕೊರ್ಗಾಂವಕರ್(24), ವಾಸು ಕುಮಾರ್(24), ಮಲಿಕ್ ಶೇಖ್ (18) ಇವರೆಲ್ಲ ಗ್ಯಾಂಗ್ ವಾರ್ ಬಂಧಿತ ಆರೋಪಿಗಳಾಗಿದ್ದಾರೆ,
ಈ ಗ್ಯಾಂಗ್ ವಾರ್ ನಲ್ಲಿ ಪೋಲಿಸರು 8 ಜನರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಅಧಿಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ 3 ವರ್ಷಗಳ ಅವಧಿಯಲ್ಲಿ ಮಡಗಾಂವ ಕೋಲ್ವಾ ಮುಂಗೂಲ್ ಪರಿಸರದಲ್ಲಿ ಇಂತಹ 3 ಹಲ್ಲೆ ಪ್ರಕರಣಗಳು ನಡೆದಿದೆ. ಈ ಗ್ಯಾಂಗ್ ಪ್ರಕರಣದಿಂದಾಗಿ ಜನ ಬೆಚ್ಚಿಬಿದ್ದಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.