ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಲಕ್ಷಾಂತರ ರೂ ಮೌಲ್ಯದ ಬಂಗಾರ ಖರೀದಿಸಿ ನಂತರ ಆರ್ ಟಿಜಿಎಸ್ ಮೂಲಕ ಹಣ ಸಂದಾಯ ಮಾಡಿರುವುದಾಗಿ ಬೋಗಸ್ ಮೆಸೇಜ್ ತೋರಿಸಿ ಮೋಸ ವೆಸಗಿದ ಹೈದರಾಬಾದ್ ನ ಆರೋಪಿ ಮಿರ್ಜಾ ಶೆರಾಜ್ ಅಲಿಬಾಯಿಗ್ (38) ಎಂಬ ಆರೋಪಿಯನ್ನು ಪೋಲಿಸರು ಬಂಧಿದ್ದಾರೆ. ಬಂಧಿತ ಆರೋಪಿಯು ಪಣಜಿಯ ಬಂಗಾರ ಅಂಗಡಿಯೊಂದರಲ್ಲಿ 1,41,157 ರೂ ಮೌಲ್ಯದ ಬಂಗಾರ ಪಡೆದುಕೊಂಡು ಪರಾರಿಯಾಗಿದ್ದ.

ಬಂಧಿತ ಆರೋಪಿಯಿಂದ ಪೋಲಿಸರು ಎಲ್ಲ ಬಂಗಾರದ ಆಭರಣಗಳನ್ನು ವಷಪಡಿಸಿಕೊಳಡಿದ್ದಾರೆ. ಬಂಧಿತ ಆರೋಪಿಯ ವಿರುದ್ಧ ದೇಶದ ಇತರ ರಾಜ್ಯಗಳಲ್ಲಿ 9 ಪ್ರಕರಣ ದಾಖಲಾಗಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ಕುರಿತು ಭಾರತೀಯ ದಂಡ ಸಂಹಿತೆ ಖಾಯ್ದೆ ಕಳಮ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪಣಜಿಯ ಜ್ಯುವೆಲರಿ ಮಾಲೀಕ ತೇಜಸ್ ಸಾಳಕರ್ ರವರು ಪಣಜಿ ಪೋಲಿಸರಿಗೆ ನೀಡಿರುವ ಮಾಹಿತಿಯ ಅನುಸಾರ- ಆರೋಪಿಯು ಅಗಷ್ಟ 11 ರಂದು ಈ ಬಂಗಾರ ಅಂಗಡಿಯಲ್ಲಿ ಸಣ್ಣ ಮಂಗಳಸೂತ್ರ, ಹಾಗೂ ಕೆಲವು ಬಂಗಾರದ ಲಾಕೇಟ್, ಕಿವಿ ಓಲೆಗಳನ್ನು ಖರೀದಿಸಿದ್ದ.

ಈತ ಒಟ್ಟೂ 1,41,157 ರೂ ಗಳ ಆರ್ ಟಿಜಿಎಸ್ ಮಾಡಿರುವುದಾಗಿ ಬೋಗಸ್ ಮೆಸೇಜ್ ತೋರಿಸಿದ. ಅಂಗಡಿ ಮಾಲೀಕರು ಈ ಮೆಸೇಜ್ ನಿಜವೆಂದು ನಂಬಿದರು. ಆದರೆ ನಿಜವಾಗಿ ನೋಡಿದರೆ ಅಂಗಡಿ ಮಾಲೀಕರಿಗೆ ಯಾವುದೇ ಮೆಸೇಜ್ ಬಂದಿರಲಿಲ್ಲ. ನಂತರ ಈ ಕುರಿತು ಅಂಗಡಿ ಮಾಲೀಕರು ಪಣಜಿ ಪೋಲಿಸರಿಗೆ ದೂರು ಸಲ್ಲಿಸಿದರು. ಪೋಲಿಸರು ಪೋಲಿಸ್ ನಿರೀಕ್ಷಕ ವಿಜಯಕುಮಾರ್ ಚೋಡಣಕರ್ ರವರ ತಂಡ ಕಾರ್ಯಾಚರಣೆ ನಡೆಸಿ ಅಗಷ್ಟ 12 ರಂದು ಪೋಲಿಸರು ಬಂಧಿಸಿದ್ದಾರೆ.