ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ 25 ವರ್ಷಗಳ ಪೂರ್ವ ಭಾರತದಿಂದ ನಷ್ಠಗೊಳಿಸಲಾಗಿದ್ದ “ನಾರು” ಎಂಬ ಹೆಸರಿನ ಹಗ್ಗದ ರೀತಿಯಲ್ಲಿರುವ ಅಪಾಯಕಾರಿ ಜೀವಜಂತುವೊಂದು ಗೋವಾದಲ್ಲಿ ಪತ್ತೆಯಾಗಿದ್ದು ಆತಂಕ ಹೆಚ್ಚುವಂತಾಗಿದೆ. ಈ ಕುರಿತಂತೆ ಪರಿಸರ ಪ್ರೇಮಿ ಸಂದೀಪ ಪಾರಕರ್ ರವರು ಈ ಜಂತುವನ್ನು ವೀಕ್ಷಿಸಿದ್ದು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಫೆಬ್ರುವರಿ 2000 ರಲ್ಲಿ ಜಾಗತಿಕ ಆರೋಗ್ಯ ಸಂಘಟನೆಯು “ನಾರು” ಎಂಬ ಹೆಸರಿನ ಈ ಜಂತು ಭಾರತದಲ್ಲಿ ಸಂಪೂರ್ಣ ನಷ್ಠವಾಗಿದೆ ಎಂದು ಪ್ರಮಾಣಿಕರಿಸಿತ್ತು. ಆದರೆ ಇದೀಗ ಗೋವಾದ ಖಾಂಡೆಪಾರ್-ಪೊಂಡಾದಲ್ಲಿ ನೀರಲ್ಲಿ ಈ ಅಪಾಯಕಾರಿ ಜೀವ ಜಂತು ಪತ್ತೆಯಾಗಿದೆ.
ಇದರಿಂದಾಗಿ ನೀರನ್ನು ಗಾಳಿಸಿ ಕುದಸಿಸಿ ಕುಡಯಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ಮೀಟರ್ ಗಳಿಗಳಿಂತಲೂ ಉದ್ಧವಾಗಿರುವ ಹಾಗೂ ಹಗ್ಗದಂತೆ ಕಂಡುಬರುವ ಈ ಜಂತು ಮಾನವನ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಹೆಚ್ಚಿನ ಮಾಹಿತಿ ಪಡೆಯಲು ಈ ಜಂತನ್ನು ತಜ್ಞರಿಗೆ ಕಳುಹಿಸಲಾಗಿದೆ ಎಂದು ಪೊಂಡಾ ಆರೋಗ್ಯಾಧಿಕಾರಿ ಡಾ. ಸ್ಮೀತಾ ಪಾರ್ಸೇಕರ್ ಮಾಹಿತಿ ನೀಡಿದ್ದಾರೆ.
ಈ ಜಂತು ನಮ್ಮ ದೇಹದೊಳಗೆ ಸೇರಿದಂತೆ ಏನಾಗುತ್ತೆ ಗೊತ್ತಾ…?
ಈ ಜಂತಿನಿಂದ ಉಂಟಾಗುವ ರೋಗಕ್ಕೆ ಡ್ರ್ಯಾಕ್ಯುಕ್ಯುಲಸ್ ಮೆಡಿನೆನ್ಸಿಸ್ ಎಂದು ಕರೆಯುತ್ತಾರೆ. ಈ ಜಂತಿಗೆ ಗಿನಿ ವರ್ಮ ಎಂದುದಾಗಿಯೂ ಕರೆಯುತ್ತಾರೆ. ಮರಾಠಿ ಭಾಷೆಯಲ್ಲಿ ಈ ಜಂತಿಗೆ “ನಾರು” ಎಂದು ಕರೆಯುತ್ತಾರೆ. ನಾವು ಕುಡಿಯುವ ನೀರಿನೊಂದಿಗೆ ಈ ಜಂತಿನ ಮೊಟ್ಟೆಗಳು ಹೊಟ್ಟೆಯೊಳಗೆ ಸೇರಿದರೆ ಕಾಲಿಗೆ ಗಾಯಮಾಡಿ ಈ ಜೀವ ಜಂತು ಹೊರಗೆ ಬರುತ್ತದೆ. ಮಾನವನ ಜೀವಕ್ಕೂ ಹಾನಿಯುಂಟುಮಾಡುತ್ತದೆ. ಈ ಅಪಾಯಕಾರಿ ಜೀವ ಜಂತು ಗೋವಾದಲ್ಲಿ ಪತ್ತೆಯಾಗಿದೆ.